ಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಹೊಸ ಯೋಜನೆ ಒಂದನ್ನು ಕೇಂದ್ರ ಸರ್ಕಾರ ಜಾರಿ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಭಾರತ ಕೇಂದ್ರ ಸರ್ಕಾರದಿಂದ ಸೆಪ್ಟೆಂಬರ್ 17 2023 ರಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸಲಾಯಿತು.

ಈ ಒಂದು ಯೋಜನೆಯ ಮೂಲಕ ಹಣಕಾಸಿನ ನೆರವು ಮತ್ತು ಅಭಿವೃದ್ಧಿ ಅವಕಾಶಗಳನ್ನು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗೆ ಒದಗಿಸುವ ಗುರಿಯನ್ನು ಹೊಂದಿರುವಂತಹ ಒಂದು ಅನನ್ಯ ಯೋಜನೆಯಾಗಿದೆ ಎಂದು ಹೇಳಬಹುದು.
ಸದ್ಯ ಇದೀಗ ಈ ಒಂದು ಯೋಜನೆಯ ಮೂಲಕ ಹಣಕಾಸಿನ ನೆರವನ್ನು ರೇಷನ್ ಕಾರ್ಡ್ ಹೊಂದಿರುವಂತಹ ಜನರಿಗೆ ನೀಡಲಾಗುತ್ತಿದ್ದು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ :
ಹದಿನೆಂಟು ವಿವಿಧ ಕರಕುಶಲ ಕೆಲಸಗಳಲ್ಲಿ ತೊಡಗಿರುವಂತಹ ವ್ಯಕ್ತಿಗಳಿಗೆ ತಮ್ಮ ಜೀವನೋಪಾಯವನ್ನು ಸುಧಾರಿಸುವ ಸಲುವಾಗಿ ಈ ಒಂದು ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಲ್ಲಿ ಹಣಕಾಸಿನ ನೆರವನ್ನು ಮಾತ್ರವಲ್ಲದೆ ಉಪಕರಣಗಳು ಮತ್ತು ಕೌಶಲ್ಯ ಅಭಿವೃದ್ಧಿಯ ಜೊತೆಗೆ ತರಬೇತಿ ಅವಕಾಶಗಳನ್ನು ನೀಡಲಾಗುತ್ತದೆ.
ಜಿಲ್ಲಾಧಿಕಾರಿಯವರು ಇತ್ತೀಚಿಗೆ ನಡೆಸಿದಂತಹ ಪರಿಶೀಲನ ಸಭೆಯಲ್ಲಿ ಈ ಯೋಜನೆಯ ಕುರಿತು ಅರಿವು ಮೂಡಿಸಿ ಅರ್ಹ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದರು.
ಈ ಒಂದು ಯೋಜನೆಯ ಅಡಿಯಲ್ಲಿ ತರಬೇತಿ ಪೂರ್ಣಗೊಳಿಸಿದಂತಹ ವ್ಯಕ್ತಿಗಳಿಗೆ ಒಂದು ಲಕ್ಷದವರೆಗೆ ಗಣನೀಯ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಇದನ್ನು ಓದಿ : ಜಿಯೋ ಗ್ರಾಹಕರಿಗೆ ಬಂಪರ್ ಆಫರ್ : 100 GB ಉಚಿತವಾಗಿ ಸಿಗುತ್ತೆ
ವಿಶ್ವಕರ್ಮ ಯೋಜನೆಯ ಪ್ರಮುಖ ಲಕ್ಷಣಗಳು :
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ವಿವಿಧ ಸಾಂಪ್ರದಾಯಿಕ ಕರಕುಶಲ ಕೆಲಸಗಳಲ್ಲಿ ತೊಡಗಿರುವವರಿಗೆ ಜಾರಿಗೊಳಿಸಲಾಗಿದ್ದು ಸಮಗ್ರ ಪ್ರಯೋಜನಗಳನ್ನು ಇದು ಒದಗಿಸುತ್ತದೆ. ಇದರ ಪ್ರಮುಖ ಲಕ್ಷಣಗಳನ್ನು ನೋಡುವುದಾದರೆ,
- ಸಾಲ ಸೌಲಭ್ಯ : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಮೂಲ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದಂತಹ ಅರ್ಹ ಅಭ್ಯರ್ಥಿಗಳಿಗೆ ಈ ಒಂದು ಯೋಜನೆಯ ಅಡಿಯಲ್ಲಿ ಮೊದಲ ಹಂತದಲ್ಲಿ ಒಂದು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.
- ತರಬೇತಿ ಮತ್ತು ಅಭಿವೃದ್ಧಿ : ಫಲಾನುಭವಿಗಳು ಅವರ ಕರಕುಶಲತೆಯಲ್ಲಿ ಹೆಚ್ಚು ಪ್ರವೀಣರಾಗಲು ಮತ್ತು ಕೌಶಲ್ಯಗಳನ್ನು ಸುಧಾರಿಸಲು ಮೂಲ ತರಬೇತಿಯನ್ನು ಪಡೆಯುತ್ತಾರೆ. ಉತ್ಪಾದಕತೆಯನ್ನು ಸುಧಾರಿಸಲು ಸುಧಾರಿತ ಉಪಕರಣಗಳು ಮತ್ತು ತಂತ್ರಗಳನ್ನು ಈ ಒಂದು ತರಬೇತಿಯು ಅವರಿಗೆ ಪರಿಚಯಿಸುತ್ತದೆ.
- ಟೂಲ್ ಕಿಟ್ : ಈ ಒಂದು ಯೋಜನೆಯಡಿಯಲ್ಲಿ ತರಬೇತಿ ಮುಗಿಸಿದ ನಂತರ ತಮ್ಮ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಕುಶಲ್ಕರ್ಮಿಗಳಿಗೆ ಸಹಾಯ ಮಾಡಲು 15,000 ಮೌಲ್ಯದ ಟೋಲ್ ಕಿಟ್ಟನ್ನು ನೀಡಲಾಗುತ್ತದೆ.
- ಸ್ಟೈಫoಡ್ : ಫಲಾನುಭವಿಗಳು ತಮ್ಮ ಜೀವನೋಪಾಯವನ್ನು ಬೆಂಬಲಿಸಲು ತರಬೇತಿ ಅವಧಿಯಲ್ಲಿ ಸ್ಟೈಫoಡ್ ಅನ್ನು ಪಡೆಯುತ್ತಾರೆ.
- ಪ್ರಮಾಣಿಕೃತ ಮತ್ತು ಗುರುವಿನ ಚೀಟಿ : ಈ ಯೋಜನೆಯ ಅಡಿಯಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಂತಹ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಪ್ರಮಾಣ ಪತ್ರವನ್ನು ನೀಡುತ್ತದೆ. ಅಲ್ಲದೆ ಯೋಜನೆಯ ಫಲಾನುಭವಿಗಳೆಂದು ಅವರನ್ನು ಅಧಿಕೃತವಾಗಿ ಗುರುತಿಸಲಾಗುತ್ತದೆ.
- ಕೌಶಲ್ಯ ಅಭಿವೃದ್ಧಿ : ಕೌಶಲ್ಯ ಅಭಿವೃದ್ಧಿಯ ಮೇಲೆ ಈ ಯೋಜನೆ ಕೇಂದ್ರೀಕರಿಸುತ್ತದೆ.
ಅರ್ಹತೆಗಳು :
ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳಿಗಾಗಿ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಕೆಳಗೆ ತಿಳಿಸಲಾದ 18 ನಿರ್ದಿಷ್ಟ ಕರಕುಶಲ ವಸ್ತುಗಳನ್ನು ವಿನ್ಯಾಸಗೊಳಿಸಲಾಗಿದ್ದು ಅವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
- ಕಮಾರ
- ಬಡಗ
- ಶೂ ತಯಾರಕರು
- ನೇಕಾರರು
- ಅಕ್ಕಸಾಲಿಗರು
- ಟೈಲರ್ಸ್
- ಕುಂಬಾರರು
- ಸ್ಟೋನ್ ಕಾರ್ವರ್ಸ್
- ಚರ್ಮದ ಕೆಲಸಗಾರರು
- ಬುಟ್ಟಿ ನೇಯುವವರು
- ಆಟಿಕೆ ತಯಾರಕರು
- ಸಿಲ್ವರ್ ಸ್ಮಿತ್ಸ್
- ಕುಶಲಕರ್ಮಿಗಳು
- ಕೈಮಗ್ಗ ತಯಾರಿಕರು
- ಆಭರಣ ವಿನ್ಯಾಸಕರು
- ಹಿತ್ತಾಳೆ ಮತ್ತು ಕಂಚಿನಲ್ಲಿ ಕೆಲಸ ಮಾಡುವವರು
- ಕಸೂತಿ ಕಲಾವಿದರು
- ಬಿದಿರು ಕಲಾವಿದರು
- ವರ್ಣ ಚಿತ್ರಕಾರರು
ಇವುಗಳ ಜೊತೆಗೆ ಈ ಕೆಳಗಿನ ಕೆಲವೊಂದು ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು. - ಭಾರತೀಯ ನಾಗರೀಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
- 18 ವರ್ಷ ವಯಸ್ಸಿನವರಾಗಿರಬೇಕು
- ಯೋಧನೆಯ ಅಡಿಯಲ್ಲಿ ಒದಗಿಸಲಾದ ಮೂಲಭೂತ ತರಬೇತಿಯನ್ನು ಸಾಲ ಮತ್ತು ಇತರ ಪ್ರಯೋಜನಗಳಿಗೆ ಪಡೆಯಲು ಪೂರ್ಣಗೊಳಿಸಬೇಕು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಹತ್ತಿರದ ಸೇವ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಒಟ್ಟರೆ ಕೇಂದ್ರ ಸರ್ಕಾರವು ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಮತ್ತು ಕರಕುಶಲಕರ್ಮಿಗಳಿಗೆ ತಮ್ಮ ಕೌಶಲ್ಯ ಅಭಿವೃದ್ಧಿ ಹೆಚ್ಚಿಸುವ ಸಲುವಾಗಿ ತರಬೇತಿಯ ಜೊತೆಗೆ ಸಾಲ ಸೌಲಭ್ಯಗಳನ್ನು ಕೂಡ ನೀಡುತ್ತಿದೆ.
ಇದರ ಪ್ರಯೋಜನವನ್ನು ಕರಕುಶಲಕರ್ಮಿಗಳು ಪಡೆದುಕೊಳ್ಳಬೇಕೆಂದು ಇತ್ತೀಚಿಗೆ ನಡೆಸಿದಂತಹ ಪರಿಶೀಲನ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಈ ಕುರಿತಂತೆ ಹೆಚ್ಚಿನ ಅರಿವನ್ನು ಮೂಡಿಸಿ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ. ಹಾಗಾಗಿ ಈ ಯೋಜನೆಗೆ ಅರ್ಹತೆ ಹೊಂದಿರುವ ಪ್ರತಿಯೊಬ್ಬರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಈ ಲೇಖನದ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.