ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮಹಿಳೆಯರಿಗಾಗಿ ಕೇಂದ್ರದ ಮೋದಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಒಂದು ಯೋಚನೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ. ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವಂತಹ ಮಹಿಳೆಯರು ಕೇಂದ್ರ ಸರ್ಕಾರದ ಈ ಒಂದು ಯೋಜನೆಯ ಅಡಿಯಲ್ಲಿ 5 ಲಕ್ಷ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಬಡ್ಡಿಯನ್ನು ಈ ಒಂದು ಯೋಜನೆಯ ಅಡಿಯಲ್ಲಿ ಮನ್ನಾ ಮಾಡುವುದರಿಂದ ಮಹಿಳೆಯರು ಅಸಲು ಮೊತ್ತವನ್ನು ಮಾತ್ರ ಮರುಪಾವತಿ ಮಾಡಬೇಕು. ಕೇಂದ್ರದ ಈ ಹಣಕಾಸಿನ ನೆರವು ಬಹು ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ಆರ್ಥಿಕವಾಗಿ ಮಹಿಳೆಯರು ಸಮರ್ಥರಾಗಲು ಸಹಾಯಮಾಡುತ್ತದೆ. ಹಾಗಾದರೆ ಆ ಯೋಜನೆ ಯಾವುದು ಎಂದು ಈ ಕೆಳಗಿನಂತೆ ಪೂರ್ಣವಾಗಿ ತಿಳಿದುಕೊಳ್ಳಬಹುದು.
ಲಕ್ಪತಿ ದೀದಿ ಯೋಜನೆ :
ಸ್ವಂತ ಉದ್ಯಮವನ್ನು ಪ್ರಾರಂಭಿಸಲು 5 ಲಕ್ಷ ಬಡ್ಡಿ ರಹಿತ ಸಾಲವನ್ನು ಮಹಿಳೆಯರು ಕೇಂದ್ರ ಸರ್ಕಾರದ ಈ ಒಂದು ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ.
ಹಣಕಾಸಿನ ನಿರಾವನ್ನು ಬಹು ವ್ಯವಹಾರಗಳನ್ನು ಮಹಿಳೆಯರಿಗೆ ಸ್ಥಾಪಿಸಲು ಮತ್ತು ಆರ್ಥಿಕವಾಗಿ ಸಮರ್ಥರಾಗಲು ಸಹಾಯ ಮಾಡುವ ಯೋಜನೆ, ಕೇಂದ್ರದ ಲಕ್ಪತಿ ದೀದಿ ಯೋಜನೆಯಾಗಿದೆ.
ಯೋಜನೆಯ ಪ್ರಯೋಜನವನ್ನು ಪಡೆಯುವ ವಿಧಾನ :
ಕೇಂದ್ರದ ಲಖ್ಪತಿ ದೀದಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಬೇಕು.
- ಸ್ವಸಹಾಯ ಗುಂಪಿಗೆ (SHG )ಮಹಿಳೆಯರು ಸೇರಿರಬೇಕು.
- ಸ್ವಸಹಾಯ ಗುಂಪುಗಳು ಸಾಲ ಪ್ರಕ್ರಿಯೆಯನ್ನು ಮಹಿಳೆಯರಿಗೆ ಸುಗಮಗೊಳಿಸುತ್ತವೆ ಅಲ್ಲದೇ ಅಗತ್ಯ ನೆರವನ್ನು ಕೂಡ ಒದಗಿಸುತ್ತವೆ.
- ಮುಖ್ಯವಾಗಿ ಈ ಒಂದು ಯೋಜನೆಯನ್ನು ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಜಾರಿಗೊಳಿಸಲಾಗಿದೆ.
- ಮಹಿಳೆಯರು ಯಶಸ್ವಿಯಾಗಲು ಈ ಸ್ವ ಸಹಾಯ ಗುಂಪುಗಳು ಅಗತ್ಯವಿರುವ ಸಂಪನ್ಮೂಲವನ್ನು ಪಡೆಯುವುದಕ್ಕೆ ಸಹಾಯ ಮಾಡುತ್ತವೆ.
- ಈ ಯೋಜನೆಯ ಮೂಲಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಲು ತಮ್ಮ ವ್ಯಾಪಾರ ಯೋಜನೆ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಮಹಿಳೆಯರು SHG ಕಚೇರಿಗೆ ಭೇಟಿ ನೀಡಬೇಕು.
- ಸ್ವಸಹಾಯ ಗುಂಪುಗಳು ಸಾಲವನ್ನು ವಿತರಿಸುವಲ್ಲಿ ಮಹಿಳೆಯರ ವ್ಯಾಪಾರ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇದನ್ನು ಓದಿ : Ration : ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಪ್ರಾರಂಭ : ಒಂದು ಭಾರಿ ಮಾತ್ರ ಅವಕಾಶ
ತರಬೇತಿ ಕಾರ್ಯಕ್ರಮಗಳನ್ನು ಕೂಡ ಒಳಗೊಂಡಿದೆ :
ಕೇಂದ್ರದ ಈ ಒಂದು ಯೋಜನೆಯು ಮಹಿಳೆಯರ ಆರ್ಥಿಕ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಕೇಂದ್ರೀಕರಿಸುವಂತಹ ತರಬೇತಿ ಕಾರ್ಯಕ್ರಮಗಳನ್ನು ಕೂಡ ಒಳಗೊಂಡಿದೆ. ಈ ಕಾರ್ಯಕ್ರಮಗಳ ಮೂಲಕ ವಿಭಿನ್ನ ಕೌಶಲ್ಯಗಳನ್ನು ಮಹಿಳೆಯರು ಕಲಿಯಬಹುದು. ಅಲ್ಲದೆ ಸ್ವಂತ ಉದ್ಯಮವನ್ನು ಹೇಗೆ ಪ್ರಾರಂಭಿಸಬಹುದು ಎಂಬುದರ ಮಾರ್ಗದರ್ಶನನ್ನು ಕೂಡ ಪಡೆಯಬಹುದಾಗಿದೆ.
- ಹಾಲು ಉತ್ಪಾದನೆ.
- ಕೋಳಿ ಸಾಕಾಣಿಕೆ.
- ಕೃಷಿ.
- ಎಲ್ಇಡಿ ಬಲ್ಬ್ಗಳ ತಯಾರಿಕೆ.
- ಕರಕುಶಲ ವಸ್ತುಗಳ ಮತ್ತು ಪಶುಸಂಗೋಪನೆ.
ಈ ಮೇಲಿನ ಕ್ಷೇತ್ರಗಳನ್ನು ತರಬೇತಿ ಕಾರ್ಯಕ್ರಮಗಳು ಹೊಂದಿರುತ್ತವೆ.
ಸಮಗ್ರ ತರಬೇತಿ ಕಾರ್ಯಕ್ರಮ :
ಕೇಂದ್ರ ಸರ್ಕಾರವು ಈ ಒಂದು ಯೋಜನೆಯ ಮೂಲಕ ಬಡ್ಡಿ ರಹಿತ ಸಾಲವನ್ನು ನೀಡುವುದಲ್ಲದೆ ತರಬೇತಿ ಕಾರ್ಯಕ್ರಮವನ್ನು ಕೂಡ ಪ್ರಾರಂಭಿಸಿದೆ. ಮಹಿಳೆಯರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಹಿಳೆಯರು ತರಬೇತಿಯನ್ನು ಪೂರ್ಣಗೊಳಿಸಿದ ನಂತರ ತಮ್ಮ ಆಯ್ಕೆಯ ವ್ಯವಹಾರಗಳನ್ನು ಪ್ರಾರಂಭಿಸಲು ಈ ಒಂದು ಯೋಜನೆಯ ಅಡಿಯಲ್ಲಿ ಸಾಲಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಯೋಜನೆಯ ಮೂಲಕ ನಡೆಸಲಾದ ತರಬೇತಿಯು ಮಹಿಳೆಯರಿಗೆ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ. ವಾಣಿಜ್ಯೋದ್ಯಮಗಳಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಈ ತರಬೇತಿ ಕಾರ್ಯಕ್ರಮಗಳು ಹೆಚ್ಚಿಸುತ್ತವೆ. ಕೇಂದ್ರ ಸರ್ಕಾರದ ಈ ಒಂದು ಉಪಕ್ರಮವು ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ವ್ಯಾಪಕ ಚಾಲನೆಯ ಭಾಗವಾಗಿದೆ ಎಂದು ಹೇಳಬಹುದು. ಭಾರತದ ಅತ್ಯಂತ ಮಹಿಳೆಯರ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುವ ಗುರಿಯನ್ನು ಕೇಂದ್ರ ಸರ್ಕಾರದ ಈ ಒಂದು ಯೋಜನೆಯು ಹೊಂದಿದೆ.
ರಾಜಸ್ಥಾನ ಸರ್ಕಾರ ಪ್ರಾರಂಭಿಸಿದೆ :
ಲಕ್ಪತಿ ದೀದಿ ಯೋಜನೆಯನ್ನು ಪ್ರಾರಂಭಿಸಿದ್ದು ಮೊದಲು ರಾಜಸ್ಥಾನ ಸರ್ಕಾರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲೂ ಮೋದಿ ಸರ್ಕಾರ ಜಾರಿಗೊಳಿಸಲು ಚಿಂತನೆ ನಡೆಸಿದೆ. ರಾಜಸ್ಥಾನದಲ್ಲಿ 2023 ಡಿಸೆಂಬರ್ 23ರಂದು ಈ ಒಂದು ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ ನಂತರ ಇದರ ಪ್ರಯೋಜನವನ್ನು ಅನೇಕ ಮಹಿಳೆಯರು ಪಡೆಯುತ್ತಿದ್ದಾರೆ.
ಒಟ್ಟಾರೆ ರಾಜಸ್ಥಾನ ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಬಡ್ಡಿ ದಹಿತ ಸಾಲವನ್ನು ಮಹಿಳೆಯರಿಗೆ ನೀಡಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ಹೇಳಬಹುದು.
ಹಾಗಾಗಿ ಯಾವಾಗ ಈ ಒಂದು ಯೋಜನೆಯು ಜಾರಿಯಾಗಲಿದೆ ಎಂಬುದರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನಿಮಗೆ ತಿಳಿಸುತ್ತೇವೆ. ಆದರೆ ಮೊದಲು ಈ ಯೋಜನೆಯ ಪ್ರಯೋಜನವನ್ನು ಯಾವ ರೀತಿ ಪಡೆದುಕೊಳ್ಳಬಹುದು ಎಂದು ಈ ಲೇಖನವನ್ನು ನೋಡುವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ. ಬಡ್ಡಿ ರಹಿತ ಸಾಲವನ್ನು ಮಹಿಳೆಯರಿಗೆ ಕೇಂದ್ರ ಸರ್ಕಾರ ನೀಡುತ್ತಿದೆ ಎಂಬುದರ ಈ ಮಾಹಿತಿಯನ್ನು ಎಲ್ಲಾ ಮಹಿಳೆಯರಿಗೂ ಶೇರ್ ಮಾಡಿ ಧನ್ಯವಾದಗಳು.