ನಮಸ್ಕಾರ ಸ್ನೇಹಿತರೆ ಈಗಾಗಲೇ 4G ಸೇವೆಯನ್ನುBSNL ಕಂಪನಿಯು ನೀಡುತ್ತಿದೆ. ಇದರ ಜೊತೆಗೆ ಹೊಸ ಪ್ಲಾನ್ ಅನ್ನು ಗ್ರಾಹಕರಿಗೆ ಕಂಪನಿ ನೀಡಿದ್ದು, ಗ್ರಾಹಕರಿಗೆ ಯಾವ ರೀತಿಯ ಪ್ಲಾನನ್ನು ಬಿಎಸ್ಎನ್ಎಲ್ ಕಂಪನಿಯು ನೀಡುತ್ತಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

4g ಸೇವೆ ಪ್ರಾರಂಭಿಸಿದ BSNL :
ಸದ್ಯ ಇದೀಗ ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಗ್ರಾಹಕರಿಗೆ ರೀಚಾರ್ಜ್ ಬೆಲೆಗಳು ಸ್ವಲ್ಪ ಹೊರೆಯಾದರು ಕೂಡ ಪೋರ್ಟ್ ಆಗುತ್ತಿದ್ದಾರೆ. ಹೀಗಾಗಿ ಗ್ರಾಹಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಹೊಸ ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕ್ಷೇತ್ರದಲ್ಲಿ ಸ್ಪರ್ಧೆ ಜೋರಾಗಿದೆ ಎಂದು ಹೇಳಬಹುದು. ಇದರ ನಡುವೆ ಸರ್ಕಾರಿ ಸ್ವಾಮ್ಯದ BSNL ಕಂಪನಿಯು 4ಜಿ ಸೇವೆಯನ್ನು ಗ್ರಾಹಕರಿಗೆ ಈಗಾಗಲೇ ಪ್ರಾರಂಭಿಸಿದೆ.
ಇದೀಗ 5 g ಸೇವೆಯನ್ನು ಕೂಡ ಪ್ರಾರಂಭಿಸಲು ಟೆಸ್ಟಿಂಗ್ ಪ್ರಾರಂಭಗೊಂಡಿದ್ದು ಇದರ ಜೊತೆಗೆ ಟೆಲಿಕಾಂ ಕಂಪನಿಗಳು ಪೈಪೋಟಿಗೆ ಬಿದ್ದು ಅತ್ಯುತ್ತಮ ಪ್ಲಾನ್ ಗಳನ್ನು ನೀಡುತ್ತಿವೆ ಎಂದು ಹೇಳಬಹುದು.
ಸದ್ಯ ಇದೀಗ 82 ದಿನದ ಅತಿ ಕಡಿಮೆ ಬೆಲೆಯ ಪ್ಲಾನ್ ಒಂದನ್ನು ಬಿಎಸ್ಎನ್ಎಲ್ ಕಂಪನಿಯು ಘೋಷಣೆ ಮಾಡಿದೆ. ಪ್ರತಿದಿನ 1.5 ಜಿಬಿ ಡೇಟಾವನ್ನು ಯಾವುದೇ ನೆಟ್ವರ್ಕಿಗೆ ಅನ್ಲಿಮಿಟೆಡ್ ಕರೆಯ ಜೊತೆಗೆ ಪ್ರತಿದಿನ 100 ಎಸ್ಎಂಎಸ್ ಸೇರಿದಂತೆ ಹಲವಾರು ಸೌಲಭ್ಯಗಳನ್ನುBSNL ಕಂಪನಿಯು ತನ್ನ ಗ್ರಾಹಕರಿಗೆ ನೀಡುತ್ತಿದೆ.
ಇದನ್ನು ಓದಿ : ಕರೆ ಶುಲ್ಕ ಕಡಿಮೆ ಮಾಡಲು TRAI ನಿರ್ಧಾರ! ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್
82 ದಿನದ ಹೊಸ ಪ್ಲಾನ್ :
BSNL ಕಂಪನಿಯು 82 ದಿನದ ಹೊಸ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿದೆ. ಇದರ ಬೆಲೆ 485 ರೂಪಾಯಿಗಳು. ಇದು ದುಬಾರಿ ಬೆಲೆ ಎನಿಸಿದರು ಕೂಡ ಲೆಕ್ಕ ಹಾಕಿದರೆ ಸದ್ಯ ಇರುವಂತಹ ಪ್ಲಾನ್ ಗಳಲ್ಲಿ ಇದು ಅತಿ ಕಡಿಮೆ ಬೆಲೆಯನ್ನು ಹೊಂದಿರುವಂತಹ ಪ್ಲಾನ್ ಆಗಿದೆ.
ಕಾರಣ ಏನೆಂದರೆ ಮೂರು ತಿಂಗಳ ಪ್ಲಾನ್ ಇದಾಗಿದ್ದು 82 ದಿನಗಳನ್ನು ಲೆಕ್ಕ ಹಾಕಿದರೆ 5.91 ರೂಪಾಯಿ ಪ್ರತಿದಿನ ಬೀಳಲಿದೆ. ಹೀಗಾಗಿ ಕಡಿಮೆ ಬೆಲೆಗೆ ಡೇಟಾ ಕಾಲ್ ಎಸ್ಎಂಎಸ್ ಸೌಲಭ್ಯ ಇಷ್ಟು ಇತರ ಟೆಲಿಕಾಂ ಕಂಪನಿಗಳಲ್ಲಿ ಸಿಗುವುದು ಕಷ್ಟ ಸಾಧ್ಯ.
- ಈ ಒಂದು ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ ಬಿಎಸ್ಎನ್ಎಲ್ ಗ್ರಾಹಕರಿಗೆ ರೋಮಿಂಗ್ ಫ್ರಿ
- ಅಧಿಕೃತ ಸೆಲ್ಫ್ ಕೇರ್ ಆಪ್ ಮೂಲಕ ಬಿಎಸ್ಎನ್ಎಲ್ ಗ್ರಾಹಕರು ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
- ಒಂದು ಬಾರಿ ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿದರೆ 82 ದಿನದವರೆಗೆ ಲಭ್ಯವಿರುತ್ತದೆ.
ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಳ್ಳಲು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ BSNL ಮೊಬೈಲ್ ನಂಬರ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಅದಾದ ನಂತರ ಓಟಿಪಿಯನ್ನು ನಮೂದಿಸಿ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಳ್ಳಬಹುದು.
ಇತರ ಟೆಲಿಕಾಂ ಸರ್ವಿಸ್ ಕಂಪನಿಗಳಿಗೆ ನಡುಕ :
ಇತರ ಟೆಲಿಕಾಂ ಕ್ಷೇತ್ರಗಳಿಗೆ ಬಿಎಸ್ಎನ್ಎಲ್ ಇದೀಗ ಪೈಪೋಟಿ ನೀಡಿ ಲಾಭದಾಯಕ ಸಂಸ್ಥೆಯನ್ನಾಗಿ ಮಾಡಲು ಕಂಪನಿಯು ಹೊಸ ವಿಧಾನವನ್ನು ಅನುಸರಿಸುತ್ತಿದೆ. ಸದ್ಯ ಈಗ 5ಜಿ ನೆಟ್ವರ್ಕ್ ಪರೀಕ್ಷೆ ನಡೆಸುತ್ತಿದ್ದು ಟೆಲಿಕಾಂ ಸಚಿವರಾದ ಜ್ಯೋತಿ ರಾದಿತ್ಯ ಸಿಂಧಿಯಾ 5ಜಿ ನೆಟ್ವರ್ಕ್ ಪರೀಕ್ಷೆಯನ್ನು ಇತ್ತೀಚೆಗೆ ಮಾಡಿದ್ದರು.
BSNL 5ಜಿ ನೆಟ್ವರ್ಕ್ ಮೂಲಕ ವಿಡಿಯೋ ಕಾಲ್ ಮಾಡಿ ಇದನ್ನು ಪರೀಕ್ಷಿಸಿದ್ದರು. ನೀನು 5gಸೇವೆಯನ್ನು ಬಿಎಸ್ಎನ್ಎಲ್ ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಮುಕ್ತವಾಗಿ ಮಾಡಲಿದೆ. ಇದರಿಂದ ಇತರ ಟೆಲಿಕಾಂ ಕಂಪನಿಗಳಿಗೆ ನಡುಕ ಶುರುವಾಗಿದೆ ಎಂದು ಹೇಳಬಹುದು.
BSNL ಅವರ ಹಾಗೂ ನೆಟ್ವರ್ಕ್ ಕನೆಕ್ಷನ್ ದೇಶದ ಮೂಲೆ ಮೂಲೆಯಲ್ಲಿ ಇದೆ ಆದರೆ ಕಡಿಮೆ ಫ್ರೀಕ್ವೆನ್ಸಿ ಬಳಸಲಾಗಿತ್ತು. ಆದರೆ ಇದೀಗ ಫ್ರೀಕ್ವೆನ್ಸಿ ಹೆಚ್ಚಿಸುವಂತಹ ಕೆಲಸ ಕಂಪನಿಯು ಮಾಡುತ್ತಿದ್ದು 5g ಸೇವೆ ದೇಶದ ಮೂಲೆ ಮೂಲೆಯಲ್ಲಿ ಲಭ್ಯವಾಗಲಿದೆ.
ಒಟ್ಟಾರೆ ಸರ್ಕಾರಿ ಸ್ವಾಮ್ಯದ BSNL ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಹೊಸ ಪ್ಲ್ಯಾನ್ ಗಳನ್ನು ಬಿಡುಗಡೆ ಮಾಡುತ್ತಿದ್ದು ಗ್ರಾಹಕರನ್ನು ಇನ್ನಷ್ಟು ತನ್ನತ್ತ ಸೆಳೆಯಲು ಮುಂದಾಗುತ್ತಿದೆ. ಶೀಘ್ರದಲ್ಲಿಯೇ ಬಿಎಸ್ಎನ್ಎಲ್ 5ಜಿ ಸೇವೆಯು ಪ್ರಾರಂಭವಾಗಲಿದೆ ಎಂಬುದರ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕಂಪನಿಗೆ ಪೋರ್ಟ್ ಆಗಲು ತಿಳಿಸಿ ಧನ್ಯವಾದಗಳು.