ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುತ್ತಾರೆ. ಅಲ್ಲದೆ ವಾಹನಗಳನ್ನು ರಸ್ತೆಗಳಲ್ಲಿ ಓಡಿಸುವ ಸಂದರ್ಭದಲ್ಲಿ ವಾಹನ ಚಾಲಕರಿಗೆ ಡ್ರೈವಿಂಗ್ ಲೈಸೆನ್ಸ್ ಅತ್ಯವಶ್ಯಕ ದಾಖಲೆಯಾಗಿದೆ.
ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿಯನ್ನು ಸಲ್ಲಿಸುವವರಿಗೆ ಇವತ್ತಿನ ಲೇಖನದಲ್ಲಿ ಸಿಹಿ ಸುದ್ದಿ ಎಂದು ಹೇಳಬಹುದು. ಹಾಗಾದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಹೇಗೆ ಪಡೆಯಬೇಕು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಏನೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
ಹೊಸ ನಿಯಮಗಳು ಜೂನ್ 1 ರಿಂದ ಜಾರಿ :
ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಸದಾಗಿ ಪಡೆಯುವವರು ಸುಲಭವಾಗಿ ಪಡೆದುಕೊಳ್ಳಬಹುದು. RTO ಕಚೇರಿಗೆ ಇನ್ನು ಮುಂದೆ ಹೋಗಿ ಟೆಸ್ಟ್ ಕೊಡುವ ಅವಶ್ಯಕತೆ ಇಲ್ಲ.
ಸರ್ಕಾರವು ಚಾಲನಾ ಪರವಾನಗಿ ಮತ್ತು ತರಬೇತಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. 2024 ಜೂನ್ 1 ರಿಂದಲೇ ಸರ್ಕಾರ ತಂದಿರುವಂತಹ ಈ ಹೊಸ ನಿಯಮಗಳು ಜಾರಿಯಾಗಲಿವೆ.
ಹಾಗಾದರೆ ಯಾವೆಲ್ಲ ನಿಯಮಗಳು ಬದಲಾವಣೆಯಾಗಿದೆ ಡ್ರೈವಿಂಗ್ ಲೈಸೆನ್ಸ್ ಅನ್ನು ಆನ್ಲೈನ್ ಮೂಲಕ ಹೇಗೆ ಪಡೆದುಕೊಳ್ಳಬಹುದು ಎಂಬುದರ ಮಾಹಿತಿಯನ್ನು ಇದೀಗ ನೋಡಬಹುದು.
ಹೊಸ ನಿಯಮಗಳ ಪ್ರಕಾರ
- RTO ಕಚೇರಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ.
- ಖಾಸಗಿ ಟ್ರೈನಿಂಗ್ ಸೆಂಟರ್ ಗಳಲ್ಲಿಯೇ ಚಾಲನಾ ಪರೀಕ್ಷೆಗೆ ಹಾಜರಾಗಬಹುದಾಗಿದೆ.
- ಖಾಸಗಿ ಟ್ರೈನಿಂಗ್ ನವರು ಚಾಲನ ಪರೀಕ್ಷೆ ನಡೆಸಿ ನಿಮಗೆ ಪ್ರಮಾಣ ಪತ್ರವನ್ನು ಕೊಡುತ್ತಾರೆ.
- ನಂತರ ಡ್ರೈವಿಂಗ್ ಲೈಸೆನ್ಸ್ ಅನ್ನು RTO ಕಚೇರಿಯಿಂದ ಪಡೆದುಕೊಳ್ಳಬಹುದು.
ಸರ್ಕಾರ ಜಾರಿಗೆ ತಂದಿರುವಂತಹ ಈ ಹೊಸ ನಿಯಮಗಳ ಮುಖ್ಯ ಉದ್ದೇಶವೇನೆಂದರೆ ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್ ಗಾಗಿ ನೇರವಾಗಿ RTO ಕಚೇರಿಗಳಿಗೆ ಹೋಗುವುದನ್ನು ತಪ್ಪಿಸುವುದೇ ಆಗಿದೆ ಹಾಗಾಗಿ ಆನ್ಲೈನ್ ಮೂಲಕವೇ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದು.
ಇದನ್ನು ಓದಿ : ರೈತರ ಜಮೀನಿಗೆ ಉಚಿತ ತಂತಿ ಬೇಲಿ ಹಾಕಲು ಅರ್ಜಿ ಅಹ್ವಾನ : ಕೂಡಲೇ ಅಪ್ಲೈ ಮಾಡಿ
ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ :
- ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವವರು ಸರ್ಕಾರಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- https://parivahan.gov.in/parivahan/ಗೆ
- ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಆನ್ಲೈನ್ ಸರ್ವಿಸ್ ಎಂಬುದರ ಮೇಲೆ ಆಯ್ಕೆ ಮಾಡಬೇಕು.
- ನಂತರ ಡ್ರೈವಿಂಗ್ ಲೈಸೆನ್ಸ್ ಸಂಬಂಧಿಸಿದ ಸೇವೆಗಳ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನೀವು ವಾಸಿಸುವ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು.
- ನಂತರ learners licence application ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
- ಅದರಲ್ಲಿ ಅರ್ಜಿ ನಮೂನೆಯನ್ನು ಪಡೆದುಕೊಂಡು ನಿಮಗೆ ಕಾಣಿಸುವಂತಹ ಎಲ್ಲ ವಿವರಗಳನ್ನು ಭರ್ತಿ ಮಾಡಿ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
- ಕೊನೆಯದಾಗಿ ಟೆಸ್ಟ್ ಡ್ರೈವ್ ಡೇಟ್ ಅನ್ನು ಆಯ್ಕೆ ಮಾಡಿ ಅದರಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
- ನಿಮ್ಮ ಆದ್ಯತೆಗೆ ಅನುಗುಣವಾಗಿ ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲಿಕೇಶನ್ ಅನ್ನು ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕ ಸಲ್ಲಿಸಬಹುದು.
- ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ RTO ಕಚೇರಿಗೆ ಅಗತ್ಯ ದಾಖಲಾ ವೃತ್ತಿಗಳೊಂದಿಗೆ ಭೇಟಿ ನೀಡಿ ಡ್ರೈವಿಂಗ್ ಸ್ಕಿಲ್ ಪ್ರೂಫ್ ಅನ್ನು ಅಧಿಕಾರಿಗಳಿಗೆ ತೋರಿಸಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದು.
ಡ್ರೈವಿಂಗ್ ಲೈಸೆನ್ಸ್ ಶುಲ್ಕ :
- ಕಲಿಕಾ ಪರವಾನಗಿ : 200
- ಕಲಿಕಾ ಪರವಾನಗಿ ನವೀಕರಣ : 200
- ಅಂತರಾಷ್ಟ್ರೀಯ ಪರವಾನಗಿ : 1000
- ಶಾಶ್ವತ ಪರವಾನಗಿ : 200
- ಶಾಶ್ವತ ಪರವಾನಗಿ ನವೀಕರಣ : 200
- ಡ್ರೈವಿಂಗ್ ಸ್ಕೂಲ್ ಲೈಸೆನ್ಸ್ ವಿತರಣೆ ಮತ್ತು ಅಪ್ಡೇಟ್ : 10,000
- ಡ್ರೈವಿಂಗ್ ಸ್ಕೂಲ್ ನಕಲು ಪರವಾನಗಿ : 5,000
ಹೊಸ ನಿಯಮಗಳು :
- ನಿಯಮ ಉಲ್ಲಂಘನೆ ಮಾಡಿದರೆ 25 ವರ್ಷಗಳವರೆಗೆ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲ.
- 9 ಲಕ್ಷ ಹಳೆಯ ಸರ್ಕಾರಿ ವಾಹನಗಳನ್ನು ಹೊಸ ನಿಯಮಗಳ ಪ್ರಕಾರ ಬ್ಯಾನ್ ಮಾಡಲಾಗುತ್ತದೆ.
- ಇದರ ಮುಖ್ಯ ಉದ್ದೇಶ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದಾಗಿದೆ.
- ಮಿತಿಮೀರಿ ಸ್ಪೀಡ್ ನಲ್ಲಿ ವಾಹನ ಚಲಾವಣೆ ಮಾಡುವವರಿಗೆ : 1000 ದಿಂದ 2000 ರೂಪಾಯಿಗಳವರೆಗೆ ಫೈನ್.
- ಅಪ್ರಾಪ್ತರು ಡ್ರೈವಿಂಗ್ ಮಾಡುವ ಸಂದರ್ಭದಲ್ಲಿ ಸಿಕ್ಕಿ ಬಿದ್ದರೆ : 25000 ಫೈನ್ ಮತ್ತು ವಾಹನ ಮಾಲೀಕರ ಡ್ರೈವಿಂಗ್ ಲೈಸನ್ಸ್ ಕಾರ್ಡ್ ಕ್ಯಾನ್ಸಲ್ ಮಾಡ ಲಾಗುತ್ತದೆ.
- ಅಲ್ಲದೆ ಸಿಕ್ಕಿಬಿದ್ದಂತಹ ಅಪ್ಪ್ರಾಪ್ತರಿಗೆ ಡ್ರೈವಿಂಗ್ ಲೈಸೆನ್ಸ್ ಅನ್ನು 25 ವರ್ಷ ವಯಸ್ಸಾಗುವವರೆಗೆ ನೀಡುವುದಿಲ್ಲ.
ಒಟ್ಟಾರೆ ವಾಹನ ಚಾಲನೆ ಮಾಡುವವರಿಗೆ ಡ್ರೈವಿಂಗ್ ಲೈಸೆನ್ಸ್ ಅತ್ಯಂತ ಪ್ರಮುಖ ದಾಖಲೆಯಾಗಿದ್ದು ಇದಿಲ್ಲದೆ ಯಾವುದೇ ರೀತಿಯ ವಾಹನಗಳನ್ನು ಚಲಾವಣೆ ಮಾಡಿದರೆ ದಂಡ ವಿಧಿಸಲಾಗುತ್ತದೆ.
ಹಾಗಾಗಿ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಗಾಗಿ ಆರ್ ಟಿ ಓ ಕಚೇರಿಗೆ ಅಲೆಯುವ ಅಗತ್ಯವಿಲ್ಲ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿದ ಧನ್ಯವಾದಗಳು.