ನಮಸ್ಕಾರ ಸ್ನೇಹಿತರೆ ರೈತರಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡು ಹಲವರು ಯೋಜನೆಗಳನ್ನು ಜಾರಿಗೆ ತಂದಿವೆ. ನಮ್ಮ ದೇಶದ ಬೆನ್ನೆಲುಬು ಅನ್ನದಾತರು ಎಂದೂ ರೈತರನ್ನು ಕರೆಯಲಾಗುತ್ತದೆ. ಜಮೀನಿನಲ್ಲಿ ರೈತನ ಬೆಳೆ ಬೆಳೆಯದಿದ್ದರೆ ಮನುಷ್ಯ ಕುಲಕ್ಕೆ ಆಹಾರವೆ ಸಿಗುವುದಿಲ್ಲ ಎಂದು ಹೇಳಬಹುದು.

ಜಮೀನುಗಳಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆದು ಅದನ್ನು ಮಾರುವ ಸಂದರ್ಭದಲ್ಲಿ ರೈತರಿಗೆ ಆಸ್ಕ್ ಬೆಳೆಗೆ ಸರಿಯಾದಂತಹ ಬೆಲೆ ಸಿಕ್ಕರೆ ಅವರು ಮಾಡಿದಂತಹ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತೆ ಆಗುತ್ತದೆ ಆದರೆ ಕೆಲವು ಸಂದರ್ಭಗಳಲ್ಲಿ ತಾನು ಬೆಳೆದಂತಹ ಲಾಭವನ್ನು ರೈತ ಪಡೆಯುವುದಕ್ಕಿಂತ ಅಧಿಕ ನಷ್ಟವನ್ನೇ ಅನುಭವಿಸುತ್ತಾನೆ.
ರೈತರು ಇಂತಹ ಸಂದರ್ಭದಲ್ಲಿ ಬೇಸರಗೊಂಡು ವ್ಯವಸಾಯ ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಇಂತಹ ಹಲವಾರು ಉದಾಹರಣೆಗಳು ಈಗಾಗಲೇ ನಮ್ಮ ಕಣ್ಮುಂದೆ ಇವೆ ಅಲ್ಲದೆ ತಾನು ಬೆಳೆದಂತಹ ಬೆಳೆಗಳನ್ನು ರೈತ ಕಾಪಾಡಿಕೊಳ್ಳುವುದು ಒಂದು ಸವಾಲಾಗಿಯೇ ಇದೆ ಎಂದು ಹೇಳಬಹುದು.
ರೈತರ ಜಮೀನಿಗೆ ಉಚಿತ ತಂತಿ ಬೇಲಿ ಹಾಕಲು ಅರ್ಜಿ :
ಬೆಳೆಗಳನ್ನು ಇತ್ತೀಚಿನ ದಿನಗಳಲ್ಲಿ ರಕ್ಷಿಸುವುದು ರೈತರಿಗೆ ಗಂಭೀರ ಸಮಸ್ಯೆಯಾಗಿದೆ ಏಕೆಂದರೆ ಬೆಳೆದು ನಿಂತಿರುವಂತಹ ಬೆಳೆಗಳಿಗೆ ಕಾಡು ಪ್ರಾಣಿಗಳಿಂದ ಹಾನಿಯಾಗುವ ಸಂಭವವೇ ಹೆಚ್ಚಾಗಿರುವ ಕಾರಣದಿಂದ ರೈತರ ಶ್ರಮದಿಂದ ಕಾಡು ಪ್ರಾಣಿಗಳು ಬೆಳೆದು ನಿಂತಿರುವಂತಹ ಬೆಳೆಗಳನ್ನು ನಾಶ ಮಾಡುತ್ತಾ ಇರುವುದನ್ನು ದಿನೇ ದಿನೇ ಸಾಮಾನ್ಯವಾಗಿ ನಾವು ನೋಡುತ್ತಿದ್ದೇವೆ.
ರೈತರ ಇಳುವರಿಗೂ ಕೂಡ ಇದರಿಂದಾಗಿ ಹೆಚ್ಚಿನ ಪರಿಣಾಮ ಬೀರುತ್ತದೆ ಆದ್ದರಿಂದ ತನ್ನ ಜಮೀನಿಗೆ ಸುತ್ತಲು ತಂತಿ ಬೇಲಿಗಳನ್ನು ಹಾಕಿಸಿಕೊಂಡು ರೈತರ ಕಾಡುಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಬಹುದಾಗಿದೆ. ತಮ್ಮ ಜಮೀನುಗಳಿಗೆ ತಂತಿ ಬೇಲಿಗಳನ್ನು ಹಾಕಿಸಿಕೊಳ್ಳಲು ರೈತರಿಗೆ ಆರ್ಥಿಕ ಸಮಸ್ಯೆ ಇರುವ ಕಾರಣದಿಂದ ಈ ದೇಶದ ಬಹುತೇಕ ರಾಜ್ಯಗಳಲ್ಲಿ ಈ ರೀತಿಯ ಸಮಸ್ಯೆಗಳನ್ನು ಕಾಣಬಹುದಾಗಿದೆ.
ಆದ್ದರಿಂದ ರೈತರ ಶ್ರಮಕ್ಕೆ ಉತ್ತಮ ಪ್ರತಿಫಲ ಪಡೆಯುವಂತೆ ಮಾಡಲು ಇದು ಮತ್ತು ಸಮಸ್ಯೆಯನ್ನು ಪರಿಹರಿಸಲು ಅನೇಕ ರಾಜ್ಯ ಸರ್ಕಾರಗಳು ಬೆಳೆ ರಕ್ಷಣೆಗಾಗಿ ತಮ್ಮ ಮಟ್ಟದಲ್ಲಿ ವಿವಿಧ ರೀತಿಯ ಆರ್ಥಿಕ ನೆರವಿನ ಯೋಜನೆಗಳನ್ನು ರೈತರಿಗಾಗಿ ಜಾರಿಗೆ ತಂದು ಅನುಕೂಲ ಮಾಡಿಕೊಟ್ಟಿವೆ.
ಸದ್ಯ ಇದೀಗ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಹಾಯವಾಗುವಂತೆ ಈಗಾಗಲೇ ಜಾರಿಗೆ ತಂದಿವೆ. ಅದರಲ್ಲಿ ಮುಖ್ಯವಾಗಿ ರಾಜ್ಯ ಸರ್ಕಾರವು ರೈತರಿಗೆ ಕಾಡುಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರಿಹಾರ ನೀಡುವುದಕ್ಕಾಗಿ ತಮ್ಮ ಹೊಲಗಳ ಸುತ್ತಲೂ ಬೇಲಿ ಹಾಕಲು ರೈತರಿಗೆ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಇದನ್ನು ಓದಿ : ಮಹಿಳೆಯರಿಗೆ ಸರ್ಕಾರದಿಂದ 50,000 ಜೊತೆಗೆ 25,000 ಹಣ ಫ್ರೀ : ಈ ಯೋಜನೆಗೆ ಕೂಡಲೇ ಅರ್ಜಿ ಸಲ್ಲಿಸಿ
ತಾರಾ ಬಂದಿ ಯೋಜನೆ :
ಬಿತ್ತನೆ ಮಾಡಿದ ಸಮಯದಿಂದ ಸಸ್ಯವು ಬೆಳೆದು ಬೆಳೆ ಬರುವವರೆಗೂ ರೈತರು ಬೆಳೆಯನ್ನು ನೋಡಿಕೊಳ್ಳುತ್ತಾರೆ. ಕೋತಿಗಳು ಎಮ್ಮೆಗಳು ಮತ್ತು ಪಕ್ಷಿಗಳಿಂದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವ ಕಾರಣದಿಂದ ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ಬೇಲಿ ಹಾಕುತ್ತಾರೆ. ಸದ್ಯದೀಗ ರೈತರಿಗಾಗಿ ಸರ್ಕಾರ ಹೊಸ ಯೋಜನೆ ಯನ್ನು ತಂದಿದೆ.
ರೈತರು ತಮ್ಮ ಹೊಲಗಳ ಸುತ್ತಲೂ ಬೇಲಿ ಹಾಕಲು ತಾರಾ ಬಂದಿ ಯೋಜನೆಯ ಮೂಲಕ ಅನುದಾನವನ್ನು ಪಡೆದುಕೊಳ್ಳಬಹುದಾಗಿದೆ. ಸ್ವಂತವಾಗಿ ಬೇಲಿ ಹಾಕಲು ತಗಲುವ ಹಣದ ಶೇಕಡ 90ರಷ್ಟು ಸಬ್ಸಿಡಿಯನ್ನು ಈ ಒಂದು ಯೋಜನೆಯು ಒದಗಿಸುತ್ತದೆ.
- 20,000 ಬೇಲಿ ಹಾಕಲು ರೈತರಿಗೆ ವೆಚ್ಚವಾಗಿದ್ದರೆ.
- 18 ಸಾವಿರ ರೂಪಾಯಿಗಳನ್ನು ಸರ್ಕಾರ ನೀಡುತ್ತದೆ.
- ಕೇವಲ ಎರಡು ಸಾವಿರ ರೂಪಾಯಿಗಳ ಹಣವನ್ನು ಮಾತ್ರ ರೈತರು ಪಾವತಿ ಮಾಡಬೇಕು.
ತಾರಾ ಬಂದಿ ಯೋಜನೆಗೆ ಪ್ರಮುಖ ದಾಖಲೆಗಳು :
- ಬ್ಯಾಂಕ್ ಪಾಸ್ ಬುಕ್.
- ಆಧಾರ್ ಕಾರ್ಡ್.
- ಪಾಸ್ಪೋರ್ಟ್ ಸೈಜ್ ಫೋಟೋ.
ಈ ಮೇಲಿನ ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ವಿಶೇಷ ಸೂಚನೆ :
ತಾರಾ ಬಂದಿ ಯೋಜನೆಗೆ ಕೃಷಿ ಮಾಡುವಂತಹ ಯಾವುದೇ ರೈತರು ಅರ್ಹರಾಗಿರುತ್ತಾರೆ ಈ ಯೋಜನೆ ಪ್ರಸ್ತುತ ರಾಜಸ್ಥಾನದಲ್ಲಿ ಜಾರಿಯಲ್ಲಿದೆ.
ರಾಜಸ್ಥಾನದ ರಾಜ್ಯ ಸರ್ಕಾರವು ರೈತರ ಬೆಳೆಗಳನ್ನು ರಕ್ಷಿಸುವ ಸಲುವಾಗಿ ತಮ್ಮ ಜಮೀನಿಗೆ ರೈತರು ತಂತಿ ಬೇಲಿಗಳನ್ನು ಹಾಕಲು ಅರ್ಜಿಯನ್ನು ಆಹ್ವಾನ ಮಾಡಿದೆ. ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಇಂತಹ ಯೋಜನೆಗಳು ಬಂದು ರೈತರಿಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಡಲಿ ಎಂಬುದು ಎಲ್ಲರ ಆಶಯವಾಗಿದೆ. ರಾಜಸ್ಥಾನದಲ್ಲಿ ಇರುವಂತಹ ತಾರಾ ಬಂದಿ ಯೋಜನೆ ಯ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.