ನಮಸ್ಕಾರ ಸ್ನೇಹಿತರೆ ಪ್ರತಿನಿತ್ಯವೂ ಕೂಡ ಬಳಸುವಂತಹ ಬೆಲೆ ಏರಿಕೆಯಲ್ಲಿ ಇರುವಂತಹ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ ಎಂದು ಹೇಳಬಹುದು.

ಇದೀಗ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬೆಲೆ ಹೆಚ್ಚಳವಾಗುತ್ತಿದ್ದು ಹಬ್ಬಗಳು ಸಮೈಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಕೆಜಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬೆಲೆ ಗಡಿ ದಾಟಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ನಾನ್ವೆಜ್ ಇರಲಿ ವೆಜ್ ಇರಲಿ ಬೇಕೇ ಬೇಕು. ತರಕಾರಿ ತರಲು ಹೋದಂತಹ ಜನಸಾಮಾನ್ಯರಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಖರೀದಿ ಮಾಡಲು ಹಿಂದೆಟು ಹಾಕುತ್ತಿದ್ದಾರೆ. ಇದರ ದರ ಇನ್ನಷ್ಟು ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬೆಲೆ ಏರಿಕೆ :
ಯಾವುದಾದರೂ ಒಂದು ಅಡುಗೆಯನ್ನು ಮಾಡಬೇಕಾದರೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಮುಖ್ಯ ಪದಾರ್ಥವಾಗಿದೆ. ಹಬ್ಬಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬೆಲೆ ಹೆಚ್ಚಾಗಿದ್ದು 70 ರೂಪಾಯಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ ಹಾಗೂ 400 ಬೆಳ್ಳುಳ್ಳಿಯ ಬೆಲೆ ಪ್ರತಿ ಕೆಜಿಗೆ ತಲುಪಿದೆ.
ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಇದರ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೆಲವೆಡೆ ಧಾರಾಕಾರವಾಗಿ ಮಳೆ ಬಂದ ಕಾರಣದಿಂದಾಗಿ ಬೆಳೆದಶವಾಗಿದ್ದರ ಪರಿಣಾಮ ಪ್ರತಿ ಕೆಜಿಗೆ ಬೆಳ್ಳುಳ್ಳಿಯ ಬೆಲೆ 400 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಕೋಳಿ ರೋಗ ಬಂದ ಕಾರಣದಿಂದ ಈರುಳ್ಳಿಯ ಇಳುವರಿ ಕಡಿಮೆಯಾಗಿದ್ದು ಸದ್ಯ ಇದೆ ಈಗ ಪ್ರತಿ ಕೆಜಿಗೆ 60 ರಿಂದ 70 ರೂಪಾಯಿಗಳಷ್ಟು ಈರುಳ್ಳಿಯ ಬೆಲೆ ಇದೆ.
ಈರುಳ್ಳಿಯ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಇದೀಗ ಹಿಂದೆಂದೂ ಕಾಣದ ರೀತಿಯಲ್ಲಿ ಶುಂಠಿಯ ಬೆಲೆ ಪ್ರತಿ ಕೆಜಿಗೆ 80 ರೂಪಾಯಿಗಳಷ್ಟು ಏರಿಕೆಯಾಗಿದೆ. 300 ರೂಪಾಯಿಗಳಿಗೆ ಪ್ರತಿ ಕೆಜಿಗೆ ಇದೀಗ ಶುಂಠಿ ಮಾರಾಟವಾಗುತ್ತಿದೆ. ಈರುಳ್ಳಿಯು ಬಳ್ಳಾರಿ ಕೊನ್ನೂರು ಮತ್ತು ನಾಸಿಕ್ ನಂತಹ ಪ್ರಮುಖ ಪ್ರದೇಶಗಳಲ್ಲಿ ರೈತರ ಮೇಲೆ ತೀವ್ರ ಪರಿಣಾಮ ಬೀರಿದ್ದು ಪ್ರಾಥಮಿಕವಾಗಿ ಅಕಾಲಿಕ ಮತ್ತು ಅತಿಯಾದ ಮಳೆಯಿಂದಾಗಿ ಕೊರತೆಗೆ ಕಾರಣವಾಗಿದೆ.
ಇದನ್ನು ಓದಿ : ಗಣೇಶ ಹಬ್ಬದ ಇತಿಹಾಸ ಮಹತ್ವ ಮತ್ತು ಆಚರಣೆಗಳ ಏಕೆ ಮಾಡಬೇಕು ನಿಮಗೆ ಗೊತ್ತ .?
ಬೆಳ್ಳುಳ್ಳಿಯ ಬೆಲೆಯೂ ದುಬಾರಿ :
ಈರುಳ್ಳಿ ಮಾತ್ರವಲ್ಲದೆ ಇದೀಗ ಬೆಳ್ಳುಳ್ಳಿಯ ಬೆಲೆಯೂ ಕೂಡ ಕೆಜಿಗೆ 400 ರೂಪಾಯಿಗಳಷ್ಟು ಏರಿಕೆಯಾಗಿದೆ. ಈ ರೀತಿ ಏರಿಕೆಯಾಗಲು ಅತಿವೃಷ್ಟಿಯೇ ಕಾರಣ ಎಂದು ಹೇಳಲಾಗುತ್ತಿದೆ.
- ಪ್ರತಿ ಕೆಜಿಗೆ 400 ರೂಪಾಯಿಗಳ ದರ ಬುಧವಾರ ಮಾರುಕಟ್ಟೆಯಲ್ಲಿ ಇತ್ತು.
- ಬೆಳ್ಳುಳ್ಳಿಯ ಬೆಲೆ ಕೆಜಿಗೆ ದಾಖಲೆಯ 500 ರೂಪಾಯಿಗಳವರೆಗೆ ಕಳೆದ ಡಿಸೆಂಬರ್ ಜನವರಿ ವೇಳೆಗೆ ಏರಿಕೆಯಾಗಿ ನಂತರ 280 ರಿಂದ 250 ರೂಪಾಯಿಗಳ ವರೆಗೆ ಇಳಿಕೆಯಾಗಿತ್ತು.
- ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದಲೇ ಕರ್ನಾಟಕಕ್ಕೆ ಬೆಳ್ಳುಳ್ಳಿ ಪೂರೈಕೆ ಆಗುತ್ತಿದೆ.
- ಆ ರಾಜ್ಯಗಳಲ್ಲಿ ಮಳೆ ಹೆಚ್ಚಾದ ಕಾರಣದಿಂದ ಬೆಳ್ಳುಳ್ಳಿ ಉತ್ಪಾದನೆ ಕುಸಿತವಾಗಿರುವುದೇ ಬೆಳ್ಳುಳ್ಳಿಯ ದರ ಹೆಚ್ಚಳಕ್ಕೆ ಕಾರಣವಾಗಿದೆ.
- ಸದ್ಯ ಇದೀಗ ಬೆಳ್ಳುಳ್ಳಿಯ ದರ 450ಗಳವರಿಗೆ ಏರಿಕೆಯಾಗಬಹುದು ಎಂಬುದರ ಅಂದಾಜನ್ನು ವ್ಯಾಪಾರಿಗಳು ಮಾಡಿದ್ದಾರೆ.
ಹೀಗೆ ಕೇವಲ ಬೆಳ್ಳುಳ್ಳಿಯ ಈರುಳ್ಳಿ ಜೊತೆಗೆ ಮುಂದಿನ ದಿನಗಳಲ್ಲಿ ತರಕಾರಿಗಳ ಬೆಲೆಯೂ ಕೂಡ ಸ್ವಲ್ಪ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ದಿನದಿಂದ ದಿನಕ್ಕೆ ಪ್ರತಿನಿತ್ಯವೂ ಬಳಸುವಂತಹ ತರಕಾರಿಗಳ ಬೆಲೆಯು ಹೆಚ್ಚಳವಾಗುತ್ತಿದ್ದು ಜನಸಾಮಾನ್ಯರಿಗೆ ತರಕಾರಿಗಳನ್ನು ಕೊಂಡುಕೊಳ್ಳುವುದು ಕಷ್ಟವಾಗುತ್ತಿದೆ. ಇದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಹೆಚ್ಚಾದರೆ ಹಾಗೂ ಮಳೆ ಹೆಚ್ಚಾದರೆ ಮತ್ತಷ್ಟು ತರಕಾರಿಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ವ್ಯಾಪಾರಸ್ಥರು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬೆಲೆ ಗಗನಕ್ಕೇರಿದೆ ಎಂದು ಹೇಳಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಪ್ರತಿನಿತ್ಯ ಬಳಸುವಂತಹ ತರಕಾರಿಗಳ ಬೆಲೆ ಹೆಚ್ಚಾಗಲಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.