ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೆಲವೊಂದು ಮಾಹಿತಿಗಳನ್ನು ತಿಳಿಸಲಾಗುತ್ತಿದೆ.
ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನೀಡಿದೆ. ಆದರೆ ಇದರಲ್ಲಿ ಕೆಲವೊಂದಿಷ್ಟು ಜನರು ಬಡತನ ರೇಖೆಗಿಂತ ಮೇಲಿದ್ದರೂ ಕೂಡ ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾನೆ ಇದೀಗ ರಾಜ್ಯ ಸರ್ಕಾರ ಅಂತಹ ಜನರನ್ನು ಪತ್ತೆ ಮಾಡುವ ಕಾರ್ಯವನ್ನು ಮಾಡುತ್ತಿದ್ದು ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.
ಬಿಪಿಎಲ್ ರೇಷನ್ ಕಾರ್ಡ್ ಬಗ್ಗೆ ಮಾಹಿತಿ :
10,97,621 ಜನರು ಕರ್ನಾಟಕದಲ್ಲಿ ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿರುವ ಬಗ್ಗೆ ಪತ್ತೆಯಾಗಿದೆ.
ಇದರಲ್ಲಿ 98431 ಜನರು ಆದಾಯ ತೆರಿಗೆದಾರು , 1004716 ಹೆಚ್ಚು ಆದಾಯವನ್ನು ಹೊಂದಿರುವಂತಹ ಜನರು ಮತ್ತು 4036 ಜನರು ಸರ್ಕಾರಿ ನೌಕರರಾಗಿದ್ದಾರೆ. ಇದೀಗ ಇಂಥವರ ರೇಷನ್ ಕಾರ್ಡ್ಗಳನ್ನು ಪತ್ತೆ ಮಾಡಿ ಆ ರೇಷನ್ ಕಾರ್ಡ್ ಗಳಲ್ಲಿ ರದ್ದುಗೊಳಿಸುವ ಕಾರ್ಯವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸುತ್ತಿದೆ.
ಇದನ್ನು ಓದಿ : Driving : ಡ್ರೈವಿಂಗ್ ಲೈಸೆನ್ಸ್ ಪಡೆಯುವವರಿಗೆ ಸಿಹಿ ಸುದ್ದಿ : ಟೆಸ್ಟ್ ಡ್ರೈವ್ ಇನ್ನು ಮುಂದೆ ಇರುವುದಿಲ್ಲ
ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳು :
ಒಂದು ಕುಟುಂಬದಲ್ಲಿ ಈ ಕೆಳಗಿನ ಮಾಡದಂಡಗಳಿಗೆ ಒಳಗಾಗಿರುವವರು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಲು ಅರ್ಹತೆ ಹೊಂದಿರುವುದಿಲ್ಲ.
- ಸರ್ಕಾರಿ ನೌಕರರು ಇದ್ದರೆ.
- ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ.
- ನಾಲ್ಕು ಚಕ್ರದ ಬಿಳಿ ಬೋರ್ಡ್ ವಾಹನವನ್ನು ಹೊಂದಿದ್ದರೆ.
- ಒಂದಕ್ಕಿಂತ ಹೆಚ್ಚಿನ ರೇಷನ್ ಕಾರ್ಡನ್ನು ಒಂದೇ ಮನೆಯಲ್ಲಿ ವಾಸವಿರುವವರು ಹೊಂದಿರುವವರು
- ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿದ್ದರೆ.
- 7.5 ಎಕರೆಗಿಂತ ಹೆಚ್ಚಿನ ಜಮೀನನ್ನು ಹೊಂದಿದ್ದರೆ.
- ಒಂದು ಸಾವಿರ ಚದರ ವಿಸ್ತೀರ್ಣದ ಪಕ್ಕ ಮನೆಯನ್ನು ನಗರ ಪ್ರದೇಶದಲ್ಲಿ ಹೊಂದಿರುವವರು
ಹೀಗೆ ಈ ಮೇಲಿನ ಅರ್ಹತೆಗಳನ್ನು ಹೊಂದಿರುವವರು ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿರಲು ಅರ್ಹರಾಗಿರುವುದಿಲ್ಲ. ಬಿಪಿಎಲ್ ರೇಷನ್ ಕಾರ್ಡ್ ಅಸೆಗಾಗಿ ನಕಲಿ ದಾಖಲೆಗಳನ್ನು ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆದಾದರು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ.
ಸದ್ಯ ಇದೀಗ ಸರ್ಕಾರ ಅಂಥವರನ್ನು ಪತ್ತೆ ಮಾಡಿ ದಂಡವನ್ನು ವಿಧಿಸುತ್ತಿದೆ. ರೇಷನ್ ಕಾರ್ಡ್ ಅನ್ನು ಅಕ್ರಮವಾಗಿ ಪಡೆದ ದಿನದಿಂದ ಇಲ್ಲಿಯವರೆಗೂ 34 ರೂಪಾಯಿಗಳಂತೆ ಪ್ರತಿ ಕೆಜಿ ಅಕ್ಕಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಾಹಿತಿ ನೀಡಿದೆ.
ರದ್ದಾಗಿರುವ ರೇಷನ್ ಕಾರ್ಡ್ ಗಳ ಪಟ್ಟಿಯನ್ನು ಚೆಕ್ ಮಾಡುವ ವಿಧಾನ :
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಕ್ರಮವಾಗಿ ರೇಷನ್ ಕಾರ್ಡ್ ಪಡೆದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವೇನಾದರೂ ಈ ಪಟ್ಟಿಯನ್ನು ನೋಡಲು ಬಯಸುತ್ತಿದ್ದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅದರಲ್ಲಿ ರದ್ದಾದಂತಹ ರೇಷನ್ ಕಾರ್ಡ್ ಗಳ ಪಟ್ಟಿಯನ್ನು ಸಂಪೂರ್ಣವಾಗಿ ನೋಡಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ರೇಷನ್ ಕಾರ್ಡಿನಲ್ಲಿರುವಂತಹ ಅಕ್ರಮವನ್ನು ತಡೆಯುವ ಉದ್ದೇಶದಿಂದ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದೀಗ ಕ್ರಮವಾಗಿ ಪಡೆದುಕೊಂಡಿರುವಂತಹ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸುವ ಕಾರ್ಯವನ್ನು ಮಾಡುತ್ತಿದೆ. ಹಾಗಾಗಿ ಇದರ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ರಾಜ್ಯ ಸರ್ಕಾರ ಅಕ್ರಮವಾಗಿ ಪಡೆದುಕೊಂಡಿರುವಂತಹ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸುತ್ತಿದೆ ಎಂದು ತಿಳಿಸಿ ಧನ್ಯವಾದಗಳು.