Grama One : ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಹರಿoದ ಅರ್ಜಿ ಆಹ್ವಾನ ನಿಮ್ಮ ಗ್ರಾಮ ಊರಿನಲ್ಲೇ ಕೆಲಸ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಗ್ರಾಮ ಒನ್ ಕೇಂದ್ರವನ್ನು ತೆರೆಯಲು ಆಸಕ್ತಿ ಹೊಂದಿರುವಂತಹ ಯುವಕ ಯುವತಿಯರಿಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಇಲಾಖೆಗಳ ಸೇವೆಗಳನ್ನು ಹಾಗೂ ಯೋಜನೆಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ದೊರಕಿಸಿ ಕೊಡುವ ಸಲುವಾಗಿ ಗ್ರಾಮ ಒನ್ ಎಂಬ ಕೇಂದ್ರ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ.

Invitation for applications from eligible candidates for opening Gram One Centre
Invitation for applications from eligible candidates for opening Gram One Centre

ಇದರ ಮೂಲಕ ಬಹುತೇಕ ಸೇವೆಗಳನ್ನು ಜನರು ಹೆಚ್ಚಿನ ಹಣ ಹಾಗೂ ಸಮಯದ ವ್ಯರ್ಥವಿಲ್ಲದೆ ತಮ್ಮ ಅನುಕೂಲತೆಯಿಂದ ತಮ್ಮ ಮನೆ ಬಾಗಿಲಿಗೆ ಪಡೆದುಕೊಳ್ಳುತ್ತಿದ್ದಾರೆ.

ಸದ್ಯ ಇದೆ ಈಗ ಗ್ರಾಮ ಒನ್ ಕೇಂದ್ರಗಳು ಸಹ ತಮ್ಮ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ವಿಸ್ತರಿಸಿಕೊಂಡು ಸಾಕಷ್ಟು ಅನುಕೂಲತೆಯನ್ನು ಜನತೆಗೆ ಮಾಡಿಕೊಡುತ್ತೇವೆ. ರಾಜ್ಯಾದ್ಯಂತ ಈಗಾಗಲೇ ಶೇಕಡವಾರು ಗ್ರಾಮಗಳಲ್ಲಿ ಈ ಕೇಂದ್ರಗಳು ತೆರೆಯಲಾಗಿದ್ದು ಈ ಯೋಜನೆಗೆ ಇನ್ನುಳಿದ ಭಾಗಗಳಲ್ಲಿ ಶೀಘ್ರವೇ ಚಾಲನೆ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ಗ್ರಾಮವನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ :

ಕೆಲವೊಂದು ಭಾಗಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಯೋಜನೆಗೆ ಚಾಲನೆ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಇದೇ ಹಾದಿಯಲ್ಲಿ ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ 1 ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನವನ್ನು ಮಾಡಿರುವುದರ ಬಗ್ಗೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾದ ಗುರುದತ್ತ ಹೆಗಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮ ಒನ್ ಕೇಂದ್ರ ತೆರೆಯಲು ಸ್ಥಳಗಳು :

  1. ತಲವಾಟ – 01
  2. ಎಸ್ಎಸ್ ಮೋಗ್ – 01
  3. ಉಳ್ಳೂರು- 01
  4. ಹಾರೋಗೊಳಿಗೆ- 01
  5. ಅರಳಸುರುಳಿ – 01
  6. ಬಸವಾನಿ – 01
  7. ಹೆದ್ದೂರು- 01

ಅರ್ಜಿಯನ್ನು ಸಲ್ಲಿಸಲು ಅರ್ಹತೆಗಳು :

ಗ್ರಾಮ 1 ಕೇಂದ್ರಗಳನ್ನು ತೆರೆಯಲು ಕೆಲವೊಂದು ಅರ್ಹತೆಗಳನ್ನು ಮತ್ತು ಕಂಡೀಶನ್ ಗಳನ್ನು ತಿಳಿದಿರಬೇಕು ಅವುಗಳೆಂದರೆ,

ಮಾಹಿತಿ ತಂತ್ರಜ್ಞಾನ ರಹಿತ ಮೂಲ ಸೌಕರ್ಯದ ಅವಶ್ಯಕತೆಗಳು :

  1. ಗ್ರಾಮವನ್ ಕೇಂದ್ರಗಳು ಒಂದು ಕೌಂಟರ್ ಉಳ್ಳ ಕನಿಷ್ಠ ನೂರು ಚದರ ಅಡಿಗಳ ಅಳತೆಯನ್ನು ಹೊಂದಿರಬೇಕು.
  2. ಗ್ರಾಹಕರು ಕುಳಿತುಕೊಳ್ಳಲು ನಾಲ್ಕು ಕುರ್ಚಿ ಗಳನ್ನು ಹೊಂದಿರಬೇಕು.
  3. ಪ್ರಾಂಚಾಯ ಮೂಲಕ ಸ್ಥಾಪಿಸಲಾಗುವ ಕೇಂದ್ರವು ವಿಶೇಷ ವಿಭಜನೆ ಪಾರ್ಟಿಶನ್ ಹೊಂದಿರಬೇಕು.
  4. ಬ್ರಾಂಡಿಂಗ್ ಮುದ್ರೆಗಳು : ಬ್ರಾಂಡಿಂಗ್ ಗುಣಮಟ್ಟದ ರೀತಿಯಲ್ಲಿಯೇ ಇರಬೇಕಾಗುತ್ತದೆ
  5. ಕೇಂದ್ರಗಳು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರಿಸಿಕೊಳ್ಳಬೇಕು.
  6. ಕೊಠಡಿಯ ನೆಲಹಾಸು ಗ್ರಾನೈಟ್ ಅಥವಾ ಟೈಲ್ಸ್ ನಿಂದ ಕೂಡಿರಬೇಕು.
  7. ಆರ್‌ಸಿಸಿ ಮೇಲ್ಚಾವಣಿ ಹೊಂದಿರಬೇಕು
  8. ಸಿಮೆಂಟ್ ಅಥವಾ ಇಟ್ಟಿಗೆ ಕಲ್ಲಿನಿಂದ ಗೋಡೆಗಳು ನಿರ್ಮಾಣವಾಗಿರಬೇಕು
  9. ಯಾವುದೇ ಭಾಗದಲ್ಲಿಯೂ ಕೂಡ ನೀರು ಸೋರಿಕೆಯಾಗಬಾರದು
  10. ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಕೊಠಡಿಯಲ್ಲಿ ಇರಬೇಕು
  11. ಹೊರಗಡೆ ವಾಹನ ನಿಲುಗಡೆಗೆ ಬೋರ್ಡ್ ಗಳನ್ನು ಪ್ರದರ್ಶಿಸುವುದು ಹೀಗೆ ಹೆಚ್ಚಿನ ಸಳಾವಕಾಶವನ್ನು ಹೊಂದಿರಬೇಕು.

ಪೀಠೋಪಕರಣಗಳು :

  1. ಕೌಂಟರ್ ಟೇಬಲ್
  2. ಐ ಪ್ರಿಂಟರ್ ಟೇಬಲ್
  3. ಸಿಸಿಟಿವಿ ಕಣ್ಗಾವಲು ಮತ್ತು ಎಲ್ ಸಿ ಡಿ ಟಿವಿ
  4. ಆಪರೇಟರ್ ಕುರ್ಚಿ

ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯಗಳು :

  1. ಡೆಸ್ಕ್ಟಾಪ್ /ಲ್ಯಾಪ್ಟಾಪ್
  2. ಬಯೋಮೆಟ್ರಿಕ್ಸ್ ಸ್ಕ್ಯಾನರ್
  3. ವೆಬ್ ಕ್ಯಾಮೆರಾ
  4. ವೈಫೈ ರಿಸಿವರ್
  5. ವಿವಿಧ ಕಾರ್ಯಕಾರಿ ಪ್ರಿಂಟರ್ ಮತ್ತು ಸ್ಕ್ಯಾನರ್
  6. ಅಂತರ್ಜಾಲ ಸಂಪರ್ಕ ಅಂತರ್ಜಾಲ ಸೇವೆ ಒದಗಿಸುವುದರಿಂದ ಹೊಂದಿರಬೇಕು.
  7. ಯಾವುದೇ ರೀತಿ ವೃತ್ತಿ ರಕ್ತತೆ ಇಂದ ಸೇವೆಗಳಿಗೆ ಅಂತರ್ಜಾಲ ಸಂಪರ್ಕ ವ್ಯವಸ್ಥೆಯು ಅಡ್ಡಿ ಉಂಟಾಗಬಾರದು.

ಅರ್ಹತೆಗಳು :

  1. ದ್ವಿತೀಯ ಪಿಯುಸಿ
  2. ಡಿಪ್ಲೋಮಾ
  3. ಐಟಿಐ
  4. ಪದವಿ
  5. ಸ್ನಾತಕೋತ್ತರ ಪದವಿ ಉತ್ತೀರ್ಣರಾದವರು ಅರ್ಜಿಯನ್ನು ಸಲ್ಲಿಸಬಹುದು.
  6. ಕಂಪ್ಯೂಟರ್ ಜ್ಞಾನ ಕಡ್ಡಾಯ
  7. ಒಂದರಿಂದ ಎರಡು ಲಕ್ಷ ಬಂಡವಾಳ ಹೂಡಿಕೆ ಮಾಡುವಂತಹ ಸಾಮರ್ಥ್ಯ ಅರ್ಜಿದಾರರು ಹೊಂದಿರಬೇಕು
  8. ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು
  9. ಸಮುಚ್ಚಯವು ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸುಲಭವಾಗಿ ಸಾರ್ವಜನಿಕರು ಸಂಪರ್ಕಿಸುವ ಸ್ಥಳದಲ್ಲಿರಬೇಕು.

ಅರ್ಜಿ ಸಲ್ಲಿಸುವ ವಿಧಾನ :

ಗ್ರಾಮ ಒನ್ ಕೇಂದ್ರವನ್ನು ತೆರೆಯಲು ಅರ್ಜಿಯನ್ನು ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://Karnatakaone.gov.in/Public/Gramaone

  1. ಅರ್ಜಿ ಶುಲ್ಕ : 100 ರೂಪಾಯಿ
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಸೆಪ್ಟೆಂಬರ್ 2024
    ಹೀಗೆ ಕರ್ನಾಟಕ ಸರ್ಕಾರವು ತನ್ನ ಪ್ರಮುಖ ಜಿಲ್ಲೆಗಳಲ್ಲಿ ಗ್ರಾಮವನ್ ಕೇಂದ್ರಗಳನ್ನು ಪ್ರಾರಂಭ ಮಾಡಲು ಯೋಜನೆ ರೂಪಿಸಿದ್ದು ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮವನ್ ಕೇಂದ್ರಗಳನ್ನು ಪ್ರಾರಂಭ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

ಹಾಗಾಗಿ ನಿಮ್ಮನೆ ತಿಳಿದಿರುವಂತಹ ಶಿವಮೊಗ್ಗ ಸ್ನೇಹಿತರೆ ಈ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರೇ ಏನಾದರೂ ಗ್ರಾಮ ಒನ್ ಕೇಂದ್ರವನ್ನು ತೆರೆಯಲು ಯೋಚಿಸುತ್ತಿದ್ದರೆ ಹೆಚ್ಚು ಸಹಾಯವಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Leave a Comment