ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಂತಹ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಅದು ಏನೆಂದರೆ ಸೆಪ್ಟೆಂಬರ್ ಎರಡರಂದು ಇತ್ತೀಚಿಗೆ ರೈಲ್ವೆ ನೇಮಕಾತಿ ಮಂಡಳಿಯು 11558 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಹುದ್ದೆಗಳ ವಿವರವನ್ನು ಈ ಕೆಳಗಿನಂತೆ ನೋಡುವುದಾದರೆ,
ಹುದ್ದೆಗಳ ವಿವರ :
- ನೇಮಕಾತಿ ಸಂಸ್ಥೆ : ರೈಲ್ವೆ ನೇಮಕಾತಿ ಮಂಡಳಿ (RRB)
- ಖಾಲಿ ಇರುವ ಹುದ್ದೆಗಳ ಸಂಖ್ಯೆ : 11558
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ
- ಅಧಿಕೃತ ವೆಬ್ ಸೈಟ್ : https://rrbapply.gov.in
- ಉದ್ಯೋಗದ ಸ್ಥಳ : ಅಖಿಲ ಭಾರತ
ಹುದ್ದೆಗಳ ಹೆಸರು :
- ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕರು.
- ಸ್ಟೇಷನ್ ಮಾಸ್ಟರ್.
- ಜೂನಿಯರ್ ಅಕೌಂಟ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಮತ್ತು ಸೀನಿಯರ್ ಕ್ಲಾರ್ಕ್ ಕಮ್ ಟೈಪಿಸ್ಟ್.
- ಗುಡ್ ಟೈಮ್ ಮ್ಯಾನೇಜರ್.
- ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್.
- ಅಕೌಂಟ್ಸ್ ಕ್ಲರ್ಕ್ ಕಂ ಟೈಪಿಸ್ಟ್.
- ಕ್ಲರ್ಕ್ ಕಮ್ ಟೈಪಿಸ್ಟ್.
- ಟ್ರೈನ್ ಕ್ಲರ್ಕ್.
ವಯಸ್ಸಿನ ಮಿತಿ :
ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.
- ಪದವಿ ಪೂರ್ವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ವಯಸ್ಸು : 18 ರಿಂದ 33.
- ಪದವೀಧರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸು : 18 ರಿಂದ 36.
ಶೈಕ್ಷಣಿಕ ಅರ್ಹತೆ :
ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆಯನ್ನು ತೆಗೆದುಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿ ಅಧಿಕೃತ ಅಧಿಸೂಚನೆಯ ಪ್ರಕಾರ
- 12ನೇ ತರಗತಿ.
- ಪದವೀಧರರು.
ಅರ್ಜಿ ಶುಲ್ಕದ ವಿವರ :
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 500
- ಸಿ ಬಿ ಟಿ ಪರೀಕ್ಷೆಗೆ ಹಾಜರಾದ ನಂತರ ಅಭ್ಯರ್ಥಿಗಳಿಗೆ : 400 ರೂಪಾಯಿ ಮರುಪಾವತಿ ಮಾಡಲಾಗುತ್ತದೆ.
- ಎಸ್ಸಿ ಎಸ್ಟಿ, ಪಿಡಬ್ಲ್ಯೂಡಿ, ಮಹಿಳೆಯರು, ಎಕ್ಸ ಸರ್ವಿಸ್ ಮ್ಯಾನ್, ಟ್ರಾನ್ಸ್ ಜೆಂಡರ್, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ : 250 ರೂಪಾಯಿ
ಆಯ್ಕೆಯ ಪ್ರಕ್ರಿಯೆ :
ರೈಲ್ವೆ ನೇಮಕಾತಿ ಮಂಡಳಿ ಅಧಿ ಸೂಚನೆಯ ಪ್ರಕಾರ ಅಭ್ಯರ್ಥಿಗಳನ್ನು ಈ ಕೆಳಗಿನ ವಿಧಾನಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಆನ್ಲೈನ್ ಪರೀಕ್ಷೆ : ಆನ್ಲೈನ್ ಮೂಲಕ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಉತ್ತೀರ್ಣರಾದವರಿಗೆ ಎರಡನೇ ಹಂತದಲ್ಲಿ ಆಯ್ಕೆ ಮಾಡಲಾಗುತ್ತದೆ.
- ಟೈಪಿಂಗ್ ಟೆಸ್ಟ್ ಆಪ್ಟಿಟ್ಯೂಡ್ ಪರೀಕ್ಷೆ
- ದಾಖಲೆಗಳ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ.
ಅರ್ಜಿ ಸಲ್ಲಿಸುವ ವಿಧಾನ :
ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ 11558 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆನ್ಲೈನ್ ಮೂಲಕ ಅರ್ಜುನ್ ಸಲ್ಲಿಸಲು ಅಧಿಕೃತ ವೆಬ್ ಸೈಟ್ : https://rrbapply.gov.in
ಪ್ರಮುಖ ದಿನಾಂಕಗಳು :
- CEN 05/2024 ಅಪ್ಲಿಕೇಶನ್ ಪ್ರಕ್ರಿಯೆ ಪ್ರಾರಂಭ : ಸೆಪ್ಟೆಂಬರ್ 14
- CEN 06/2024 ಅಪ್ಲಿಕೇಶನ್ ಪ್ರಕ್ರಿಯೆ ಪ್ರಾರಂಭ : ಸೆಪ್ಟೆಂಬರ್ 21 2024
- CEN ಅಪ್ಲಿಕೇಶನ್ ಕೊನೆಯ ದಿನಾಂಕ : ಅಕ್ಟೋಬರ್ 20 2024
ಒಟ್ಟಾರೆ ಅಖಿಲ ಭಾರತದ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅನಂತರ ಅರ್ಜಿಯನ್ನು ಸಲ್ಲಿಸಬೇಕು. ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಈ ಹುದ್ದೆಗಳ ಮಾಹಿತಿಯನ್ನು ನಿಮಗೆ ತಿಳಿದಿರುವ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ ಶೇರ್ ಮಾಡಿ ಧನ್ಯವಾದಗಳು.