ನಮಸ್ಕಾರ ಸ್ನೇಹಿತರೆ ನಮ್ಮ ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಸಮೀತಿಸಿದ್ದರು ಕೂಡ ಬಡತನ ಹಾಗೂ ಆಸ್ತಿಯ ಸಮಾನ ಹಂಚಿಕೆ ದೇಶದಲ್ಲಿ ಸಾಧ್ಯವಾಗಿಲ್ಲ. ಕೆಲವೊಬ್ಬರ ಬಳಿ ಅವಶ್ಯಕತೆಗಿಂತ ಹೆಚ್ಚು ಆಸ್ತಿ ಇದ್ದರೆ ಅಗತ್ಯವಿರುವಂತಹ ಎಷ್ಟೋ ಜನರು ಇದರಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದು. ಆದ್ದರಿಂದ ಸರ್ಕಾರ ಎಲ್ಲರಿಗೂ ಕೂಡ ಆಸ್ತಿ ಖರೀದಿ ಸಾಧ್ಯವಾಗಬೇಕು ಎನ್ನುವ ಉದ್ದೇಶದಿಂದ ಒಂದು ಹೊಸ ಯೋಜನೆ ಒಂದನ್ನು ಜಾರಿಗೆ ತರಲು ಮುಂದಾಗಿದೆ.
ಸದ್ಯ ಕಳೆದ ಒಂದು ವರ್ಷದಿಂದ ಈ ಯೋಜನೆಯ ಬಗ್ಗೆ ದೇಶದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು ಆಯ್ದ ವರ್ಗದ ಮಹಿಳೆಯರಿಗೆ ಈ ಯೋಜನೆಯ ಮೂಲಕ ಆಸ್ತಿ ಖರೀದಿ ಮಾಡಲು ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಸಬ್ಸಿಡಿಯನ್ನು ಕೂಡ ಈ ಸಾಲದಲ್ಲಿ ಅರ್ಧದಷ್ಟು ನೀಡಲಾಗುತ್ತಿದೆ ಎನ್ನುವುದು ಈ ಯೋಜನೆಯ ವಿಶೇಷವಾಗಿದೆ.
ಹಾಗಾದರೆ ಈ ಒಂದು ಯೋಜನೆಯ ಪ್ರಯೋಜನವನ್ನು ಯಾರೆಲ್ಲಾ ಪಡೆಯಬಹುದು ಈ ಯೋಜನೆ ಪಡೆದುಕೊಳ್ಳಲು ಅಗತ್ಯ ದಾಖಲೆಗಳು ಯಾವುವು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು.
ಭೂ ಒಡೆತನ ಯೋಜನೆ 2024 – 25 :
ಭೂ ಒಡೆತನ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದು ಈ ಯೋಜನೆಯ ಮೂಲಕ ಸಮಾನವಾಗಿ ಆಸ್ತಿಯನ್ನು ಖರೀದಿ ಮಾಡಬೇಕೆನ್ನುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಆಸ್ತಿ ಖರೀದಿ ಮಾಡಲು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರೋತ್ಸಾಹಿಸುವುದು ಈ ಯೋಜನೆಯ ಮೂಲಕ ಅವರ ಬದುಕಿಗೆ ಭದ್ರತೆಯನ್ನು ಒದಗಿಸುವುದು. ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಅರ್ಜಿಯನ್ನು ಸಲ್ಲಿಸಲು ಪ್ರಮುಖ ಷರತ್ತುಗಳು :
- ಈ ಒಂದು ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ರೂಪಿಸಲಾಗಿದ್ದು ಈ ಯೋಜನೆಗೆ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿರುವ ಮಹಿಳೆಯರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ.
- ಅರ್ಜಿಯನ್ನು ಸಲ್ಲಿಸುವ ಮಹಿಳೆಯ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕೃಷಿ ಭೂಮಿ ಇರಬಾರದು ಈ ಯೋಜನೆ ಋಷಿ ರಹಿತ ಕುಟುಂಬಗಳಿಗಷ್ಟೇ ಮೀಸಲಾಗಿದೆ.
- 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯ
- ರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- 1.5 ಲಕ್ಷ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಎರಡು ಲಕ್ಷ ನಗರ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯವು ಮೀರಿರಬಾರದು.
ಕೆಳಗೆ ತಿಳಿಸಲಾದಂತಹ ನಿಗಮಗಳ ವ್ಯಾಪ್ತಿಗೆ ಬರುವ ಕೃಷಿ ಭೂಮಿ ರಹಿತ ಕೃಷಿ ಕಾರ್ಮಿಕ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ನಿಗಮಗಳು, - ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
- ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ
- ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಭೂ ಒಡೆತನ ಯೋಜನೆಯ ಪ್ರಯೋಜನಗಳು :
- ಶೇಕಡ 50ರಷ್ಟು ಸಹಾಯಧನ ಆಸ್ತಿ ಖರೀದಿ ಘಟಕದ ವೆಚ್ಚ
- ಉಳಿದ ಶೇಕಡ 50ರಷ್ಟು ಹಣವನ್ನು ವಾರ್ಷಿಕ 6% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ.
- ಉದಾಹರಣೆಗೆ : 25 ಲಕ್ಷ ಘಟಕ ವೆಚ್ಚದ ಆಸ್ತಿ ಖರೀದಿ ಮಾಡಲು 12.5 ಲಕ್ಷ ರೂಪಾಯಿ ಸಬ್ಸಿಡಿ ಹಾಗೂ 12.5 ಲಕ್ಷ ರೂಪಾಯಿ ಹಣವನ್ನು ವಾರ್ಷಿಕ ಬಡ್ಡಿ ಆರು ಪರ್ಸೆಂಟ್ ದರದ ಅನ್ವಯ ಸುಲಭ ಕಂತುಗಳಲ್ಲಿ ತೀರಿಸುವ ಶರತ್ತಿಗೆ ಒಳಗಾಗಿ ಸಾಲವನ್ನು ಮಹಿಳೆಯರಿಗೆ ನೀಡಲಾಗುತ್ತದೆ.
ಪ್ರಮುಖ ದಾಖಲೆಗಳು :
- ಆಧಾರ್ ಕಾರ್ಡ್
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬೂ ರಹಿತ ಮಹಿಳಾ ಕಾರ್ಣಿಕ ಪ್ರಮಾಣ ಪತ್ರ
- ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
- ಕುಟುಂಬದ ಪಡಿತರ ಚೀಟಿ
- ಇನ್ನು ಕೆಲವು ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ :
ಭೂ ಒಡೆತನ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ.
- ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬೇಕು
- ಹತ್ತಿರದ ಯಾವುದೇ ಕರ್ನಾಟಕವನ್ ಬೆಂಗಳೂರು ಒನ್ ಹಾಗೂ ಗ್ರಾಮವನ್ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
- ಅಜ್ಜಿ ಇನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ 10 ಅಕ್ಟೋಬರ್ 2024
ಹೆಚ್ಚಿನ ಮಾಹಿತಿಗಾಗಿ :
ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.
- ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಅಧಿಕೃತ ವೆಬ್ಸೈಟ್
- ಸಹಾಯವಾಣಿ ಸಂಖ್ಯೆ : 9482300400
ಹೀಗೆ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭೂ ಒಡೆತನ ಯೋಜನೆ ಒಂದನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ಮಹಿಳೆಯರು ಆಸ್ತಿಯನ್ನು ಖರೀದಿ ಮಾಡಲು ಸಹಾಯವಾಗುತ್ತದೆ. ಹಾಗಾಗಿ ನಿಮಗೆ ತಿಳಿದಿರುವಂತಹ ಹಿಂದುಳಿದ ವರ್ಗದ ಮಹಿಳೆಯರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.