ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗವಕಾಶದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸಾಕಷ್ಟು ಯುವಕರು ಉದ್ಯೋಗಕ್ಕಾಗಿ ಅಲೆದಾಡುತ್ತಿರುತ್ತಾರೆ. ಅಂಥವರಿಗಾಗಿ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವಂತಹ ಡ್ರೈವರ್ ಹುದ್ದೆಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ಸರ್ಕಾರವು ತನ್ನ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅಧಿಸೂಚನೆಯನ್ನು ಹೊರಡಿಸಿದೆ. ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಲು ಪ್ರಮುಖ ಅರ್ಹತೆಗಳು ಪ್ರಮುಖ ದಾಖಲೆಗಳು ಅರ್ಜಿ ಸಲ್ಲಿಸುವ ವಿಧಾನ ವಯಸ್ಸಿನ ಮಿತಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಶೈಕ್ಷಣಿಕ ಅರ್ಹತೆ ವೇತನ ಶ್ರೇಣಿ ಅರ್ಜಿ ಶುಲ್ಕ ಆಯ್ಕೆ ವಿಧಾನ ಸಂಬಂಧಿಸಿದಂತೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದ ಫೆಡರಲ್ ಸಹಕಾರಿ ಲಿಮಿಟೆಡ್ ನಲ್ಲಿ ನೇಮಕಾತಿ :
ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹುದ್ದೆಗಳ ವಿವರವನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದು.
ಹುದ್ದೆಗಳ ವಿವರ :
- ನೇಮಕಾತಿ ಸಂಸ್ಥೆ : ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್
- ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ : 39
- ಅರ್ಜಿ ಸಲ್ಲಿಸುವ ವಿಧಾನ : ಆಫ್ ಲೈನ್
- ಉದ್ಯೋಗದ ಸ್ಥಳ : ಕರ್ನಾಟಕ
ಹುದ್ದೆಗಳ ಸಂಖ್ಯೆ ಮತ್ತು ಹೆಸರು :
- ಚಾರ್ಟೆಡ್ ಅಕೌಂಟೆಂಟ್ : 1
- ಕಾನೂನು ಅಧಿಕಾರಿ : 2
- ಮಾನವ ಸಂಪನ್ಮೂಲ ಅಧಿಕಾರಿ : 1
- ತರಬೇತಿ ಅಧಿಕಾರಿ : 1
- ಸೌಹಾರ್ದ ಅಭಿವೃದ್ಧಿ ಅಧಿಕಾರಿ : 11
- ಸಹಾಯಕರು : 8
- ಟೈಪಿಸ್ಟ್ ಮತ್ತು ಸ್ಟೆನೋ : 12
- ಕಿರಿಯ ಸಹಾಯಕ : 11
- ಉಪ ಸಿಬ್ಬಂದಿ ಹಾಗು ವಾಹನ ಚಾಲಕ : 2
ಶೈಕ್ಷಣಿಕ ಅರ್ಹತೆ :
- ಕಾನೂನು ಅಧಿಕಾರಿ ಹುದ್ದೆ : LLB
- ಚಾರ್ಟೆಡ್ ಅಕೌಂಟೆಂಟ್ ಹುದ್ದೆ : CA,CS,ICWA
- ಮಾನವ ಸಂಪನ್ಮೂಲ ಅಧಿಕಾರಿ : HR ನಲ್ಲಿ MBA
- ತರಬೇತಿ ಅಧಿಕಾರಿ ಹುದ್ದೆ : MA,MSW
- ಸೌಹಾರ್ದ ಅಭಿವೃದ್ಧಿ ಅಧಿಕಾರಿ : ಪದವಿ
- ಸಹಾಯಕರು ಹುದ್ದೆ : ಪದವಿ
- ಟೈಪ್ಸ್ ಮತ್ತು ಸ್ಟೆನೋ: ಪದವಿ
- ಕಿರಿಯ ಸಹಾಯಕರು : 12 ತರಗತಿ
- ಉಪ ಸಿಬ್ಬಂದಿ ಮತ್ತು ವಾಹನ ಚಾಲಕ : 10 ನೆ ತರಗತಿ
ಹೀಗೆ ಹುದ್ದೆಗಳಿಗೆ ಅನುಸಾರವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ.
ವಯಸ್ಸಿನ ಮಿತಿ :
ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ ನೇಮಕಾತಿ ಅಧಿ ಸೂಚನೆಯ ಪ್ರಕಾರ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯಸ್ಸಿನ ಮಿತಿ,
- ಕನಿಷ್ಟ ವಯಸ್ಸು : 30
- ಗರಿಷ್ಠ ವಯಸ್ಸು : 35
ವೇತನ ಶ್ರೇಣಿ :
ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಸಾರವಾಗಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ.
ಉದಾ: 15000-70000
ಅರ್ಜಿ ಶುಲ್ಕದ ವಿವರ :
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ
- 300-500.
ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ.
- ಸಂದರ್ಶನ.
ಅರ್ಜಿ ಸಲ್ಲಿಸುವ ವಿಧಾನ :
ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಆಫ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆಫ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಸೌಹಾರ್ದ ಸಹಕಾರಿ ಸೌದ #68.
ಮೊದಲನೇ ಮಹಡಿ 18 ನೇ ಅಡ್ಡರಸ್ತೆ.
ಮಲ್ಲೇಶ್ವರಂ.
ಬೆಂಗಳೂರು- 560055
ಪ್ರಮುಖ ದಿನಾಂಕಗಳು :
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 20 2024
ನಿಗದಿತ ದಿನಾಂಕದೊಳಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದರೆ ಕರ್ನಾಟಕ ಸರ್ಕಾರದಿಂದ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ ತಿಳಿದಿರುವ ಯುವಕ ಯುವತಿಯರಿಗೆ ಈ ಮಾಹಿತಿಯನ್ನು ಶೇರ್ ಮಾಡಿ. ಇದರಿಂದ ಅವರು ಉದ್ಯೋಗವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ ಧನ್ಯವಾದಗಳು.