ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗವಕಾಶದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ 2024 ಮತ್ತು 25ನೇ ಸಾಲಿನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ. ನೇಮಕಾತಿ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಅನಂತರ ಅರ್ಜಿಯನ್ನು ಸಲ್ಲಿಸುವುದು ಉತ್ತಮ.
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ :
ರಾಜ್ಯದಲ್ಲಿ ಇರುವಂತಹ ಯುವ ಪ್ರತಿಭೆಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಗೆಸ್ಕಾಂ ನೋಟಿಫಿಕೇಶನ್ ಕುರಿತಾದಂತಹ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಸದ್ಯ ಇದೀಗ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕಗಳು ಹುದ್ದೆಗಳ ಹೆಸರು ಕಾಲಿರುವ ಒಟ್ಟು ಹುದ್ದೆಗಳ ಸಂಖ್ಯೆ ವೇತನ ಶ್ರೇಣಿ ಉದ್ಯೋಗದ ಸ್ಥಳ ಸಂಬಂಧಿಸಿದಂತೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಈ ಕೆಳಗಿನಂತೆ ತಿಳಿಸಲಾಗಿದೆ.
ಇದನ್ನು ಓದಿ : Ration : 1 ಲಕ್ಷದವರೆಗೆ ರೇಷನ್ ಕಾರ್ಡ್ ಹೊಂದಿದವರಿಗೆ ಹಣಕಾಸಿನ ನೆರವು : ಈ ಯೋಜನೆಗೆ ಅಪ್ಲೈ ಮಾಡಿ
ಹುದ್ದೆಗಳ ವಿವರ :
- ನೇಮಕಾತಿ ಸಂಸ್ಥೆ : ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ
- ಖಾಲಿ ಇರುವ ಹುದ್ದೆಗಳ ಹೆಸರು : ಶಿಶಿಕ್ಷು ತರಬೇತಿದಾರರು
- ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ : 221
- ಉದ್ಯೋಗದ ಸ್ಥಳ : ಗುಲ್ಬರ್ಗ
- ಅರ್ಜಿ ಸಲ್ಲಿಸುವ ವಿಧಾನ : ಆಫ್ ಲೈನ್
- ಅಧಿಕೃತ ವೆಬ್ಸೈಟ್ : https://Gescom.karnataka.gov.in
ಶೈಕ್ಷಣಿಕ ಅರ್ಹತೆ :
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ ಅಧಿಸೂಚನೆಯ ಪ್ರಕಾರ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಪೂರ್ಣಗೊಳಿಸಬೇಕು.
- ಎಂಸಿವಿಟಿ ಪ್ರಮಾಣ ಪತ್ರವನ್ನು ರಾಷ್ಟ್ರೀಯ ಶಿಶಿಕ್ಷು ತರಬೇತಿ ಯೋಜನೆಯ ಅಡಿಯಲ್ಲಿ ಹಾಗೂ SCVT ಪ್ರಮಾಣ ಪತ್ರವನ್ನು (ರಾಜ್ಯ ವೃತ್ತಿ ಪ್ರಮಾಣ ಪತ್ರ) ಹೊಂದಿರಬೇಕು
- 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು
3.ITI ಪೂರ್ಣಗೊಳಿಸಿರಬೇಕು
ವಯಸ್ಸಿನ ಮಿತಿ :
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.
- ಕನಿಷ್ಠ 15 ವರ್ಷ
- ಗರಿಷ್ಟ 25 ವರ್ಷ
ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ. - SC,ST : 30 ವರ್ಷ
ಪ್ರಮುಖ ವಿಷಯಗಳು :
- ಕನ್ನಡ ಓದಲು ಮತ್ತು ಬರೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಿಳಿದಿರಬೇಕು.
- ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.
- ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಲ್ಲ.
- ಒಂದು ಬಾರಿ ಈಗಾಗಲೇ ವೃತ್ತಿ ತರಬೇತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಮತ್ತೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಇಲ್ಲ.
- ತರಬೇತಿ ಅವಧಿಯ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ ಅಭ್ಯರ್ಥಿಗಳು ವಾಸವಿರಬೇಕು
- ಊಟ ವಸತಿ ಹಾಗೂ ಇತರ ವ್ಯವಸ್ಥೆಯಲ್ಲಿ ಸ್ವಂತ ಖರ್ಚು
- ತರಬೇತಿ ಸಂದರ್ಭದಲ್ಲಿ ಸಂಸ್ಥೆಯೆಲ್ಲ ನಿಯಮಗಳಿಗೆ ಬದ್ಧರಾಗಿರಬೇಕು
ಅರ್ಜಿ ಸಲ್ಲಿಸುವ ವಿಧಾನ :
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ ಆದಿ ಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಆಫ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆಫ್ಲೈನ್ ಮೂಲಕ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ವಿಳಾಸ :
ಪ್ರಧಾನ ವ್ಯವಸ್ಥಾಪಕರು
ನಿಗಮ ಕಚೇರಿ
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ
ಜೆಸ್ಕಾಂ
ಕಲಬುರಗಿ
ಪ್ರಮುಖ ದಾಖಲೆಗಳು :
- ಎಸ್ ಎಸ್ ಎಲ್ ಸಿ ಮತ್ತು ಐಟಿಐ ಮಾರ್ಕ್ಸ್ ಕಾರ್ಡ್
- ವರ್ಗಾವಣೆ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಇತ್ತೀಚಿನ ಎರಡು ಪಾಸ್ಪೋರ್ಟ್ ಸೈಜ್ ಫೋಟೋ
- ಮೆಡಿಕಲ್ ಸರ್ಟಿಫಿಕೇಟ್
- NCVT & SCVT
ಪ್ರಮುಖ ದಿನಾಂಕಗಳು :
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕಗಳು,
- ಅರ್ಜಿಯನ್ನು ಸಲ್ಲಿಸಲು ಆರಂಭ ದಿನಾಂಕ : ಈಗಾಗಲೇ ಅರ್ಜಿ ಪ್ರಾರಂಭವಾಗಿದೆ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14 ಸೆಪ್ಟೆಂಬರ್ 2024 ಸಂಜೆ 5:30
ಹೆಚ್ಚಿನ ಮಾಹಿತಿಗಾಗಿ :
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು
- https://Gescom.karnataka.gov.in
- ಮೇಲೆ ತಿಳಿಸಿದಂತಹ ಕಚೇರಿ ವಿಳಾಸಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಹೀಗೆ ಕರ್ನಾಟಕದ ಗುಲ್ಬರ್ಗದಲ್ಲಿ ಖಾಲಿ ಇರುವಂತಹ 200 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.