ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರ ನೌಕರರಿಗೆ ಕೇಂದ್ರ ಸರ್ಕಾರದಿಂದ ಸಹಿಸುದ್ದಿಯನ್ನು ತಿಳಿಸಲಾಗುತ್ತಿದೆ. ಸದ್ಯದ ಕೇಂದ್ರ ಸರ್ಕಾರ ನೌಕರರ ಕಾಯುವಿಕೆ ಮುಗಿದಿದೆ ಎಂದು ಹೇಳಬಹುದು. ಕೇಂದ್ರ ಸರ್ಕಾರ ಜುಲೈ 2024 ರಿಂದ ಜಾರಿಗೆ ಬರಲಿರುವ ಡಿಎ ಹೆಚ್ಚಳದ ದಿನಾಂಕವನ್ನು ದೃಢೀಕರಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಸುತ್ತದೆ.
ಧೃಡಿಕರಿಸುವ ದಿನಾಂಕವನ್ನು ಸೆಪ್ಟೆಂಬರ್ ಅಂತ್ಯದಲ್ಲಿ ಘೋಷಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಎಐಸಿಪಿಐ ಸೂಚ್ಯಂಕದ ಡೇಟಾದಿಂದ 2024ರ ಜನವರಿಯಿಂದ ಜೂನುವರಿಗೆ ಎಷ್ಟು ಜಿಗಿತವನ್ನು ತುಟ್ಟಿ ಭತ್ಯೆಯಲ್ಲಿ ಕಾಣಬಹುದು ಎಂಬುದನ್ನು ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ :
AICPI ಸೂಚಂಕದ ಡೇಟಾದಿಂದ 2024ರ ಜನವರಿಯಿಂದ ಜೂನ್ ವರೆಗೆ ತುಟ್ಟಿ ಭತ್ಯೆ ಯಲ್ಲಿ ಎಷ್ಟು ಜಿಗಿತ ಕಾಣಬಹುದು ಎಂದು ನೋಡುವುದಾದರೆ, ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರು ಏಳನೇ ವೇತನ ಆಯೋಗದ ಅಡಿಯಲ್ಲಿ ನೇರ ಲಾಭವನ್ನು ಪಡೆಯುತ್ತಾರೆ.
50 ಪ್ರತಿಶತದಷ್ಟು 2024ರ ಜನವರಿಯಿಂದ ತುಟ್ಟಿ ಭತ್ಯೆಯನ್ನು ನೀಡಲಾಗುತ್ತಿದೆ. AICPI ಸೂಚಂಕದಲ್ಲಿ ಜೂನ್ ತಿಂಗಳಲ್ಲಿ 1.5 ಅಂಕಗಳ ದೊಡ್ಡ ಜಿಗಿತ ಕಂಡುಬಂದಿದ್ದು ಇದು ತುಟ್ಟಿ ಭತ್ಯೆ ಯ ಅಂಕವನ್ನು ಕೂಡ ಹೆಚ್ಚಿಸಿದೆ ಎಂದು ಹೇಳಬಹುದು.
ಇದನ್ನು ಓದಿ : Driving : ಡ್ರೈವಿಂಗ್ ಲೈಸೆನ್ಸ್ ಪಡೆಯುವವರಿಗೆ ಸಿಹಿ ಸುದ್ದಿ : ಟೆಸ್ಟ್ ಡ್ರೈವ್ ಇನ್ನು ಮುಂದೆ ಇರುವುದಿಲ್ಲ
3% ಡಿಎ ಹೆಚ್ಚಳ ಆಗಿರುತ್ತದೆ :
AICPI – IW ಸೂಚ್ಯಂಕದ ಸಂಖ್ಯೆಗಳು ಜನವರಿ ಮತ್ತು ಜೂನ್ 2024ರ ನಡುವೆ 2024 ಜುಲೈ ನಿಂದ ಮೂರು ಪ್ರತಿಶತದಷ್ಟು ತುಟ್ಟಿ ಭತ್ಯೆ ಹೆಚ್ಚಳವನ್ನು ನೌಕರರು ಪಡಿಯುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.
- 1.5 ಅಂಕಗಳ ಜಿಗಿತ ಜೂನ್ ತಿಂಗಳ AICPI ಸೂಚ್ಯಂಕದಲ್ಲಿ ಕಂಡು ಬಂದಿದೆ.
- 139.9 ಅಂಶಗಳಷ್ಟು ಮೇ ತಿಂಗಳಲ್ಲಿ ಇದೆ.
- ಈಗ 141.4ಕ್ಕೆ ಏರಿಕೆಯಾಗಿದೆ.
- 53.36ಕ್ಕೇ ತುಟ್ಟಿ ಭತ್ಯೆಯ ಅಂಕ ಏರಿಕೆಯಾಗಿದೆ.
- ಶೇಕಡ ಮೂರರಷ್ಟು ಈ ಬಾರಿ ತುಟ್ಟಿ ಭತ್ಯೆಯಲ್ಲಿ ಏರಿಕೆಯಾಗುವುದು ಸ್ಪಷ್ಟಪಡಿಸಲಾಗಿದೆ.
- 138.9 ಪಾಯಿಂಟ್ಗಳಷ್ಟು ಜನವರಿಯಲ್ಲಿ ಸೂಚ್ಯಂಕದ ಸಂಖ್ಯೆಯು ಇತ್ತು ಇದರಿಂದಾಗಿ 50.84 ಶೇಕಡಕ್ಕೆ ತುಟ್ಟಿ ಭತ್ಯೆ ಏರಿತು.
ಸೆಪ್ಟೆಂಬರ್ ನಲ್ಲಿ ಘೋಷಣೆ :
ಸೆಪ್ಟೆಂಬರ್ ಅಂತ್ಯದಲ್ಲಿ ಕೇಂದ್ರ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ ಯ ಘೋಷಣೆಯನ್ನು ಮಾಡಲಾಗುತ್ತದೆ ಆದರೆ ಜುಲೈ ತಿಂಗಳ 2024 ರಿಂದ ಮಾತ್ರವೇ ಇದು ವರೆಗೆ ಜಾರಿಗೆ ಬರಲಿದೆ. ಮಧ್ಯಂತರ ತಿಂಗಳ ಪಾವತಿಯನ್ನು ಕೂಡ ಬಾಕಿಯಾಗಿ ಮಾಡಲಾಗುತ್ತದೆ.
53 ಪ್ರತಿಶತ ತುಟ್ಟಿ ಭತ್ಯೆ ಯನ್ನು ಏಳನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರ ನೌಕರರು ಮತ್ತು ಪಿಂಚಣಿ ದಾರರಿಗೆ ನೀಡಲಾಗುತ್ತದೆ. ಕೆಲವೊಂದು ಮೂಲಗಳ ಪ್ರಕಾರ ಸೆಪ್ಟೆಂಬರ್ 25 ರಂದು ನಡೆಯಲಿದ್ದು ಈ ಸಭೆಯಲ್ಲಿ ಪ್ರಕಟಿಸಬಹುದೆಂದು ಅಜೆಂಡದಲ್ಲಿ ಸೇರಿಸಲಾಗಿದೆ. ಇನ್ನು ಕೇವಲ ಔಪಚಾರಿಕ ಘೋಷಣೆ ಮಾತ್ರ ಬಾಕಿ ಇದೆ ಎಂದು ಹೇಳಬಹುದು.
ನೌಕರರಿಗೆ ಮೂರು ತಿಂಗಳ ಬಾಕಿ ಹಣ ದೊರೆಯಲಿದೆ :
ಕೆಲವೊಂದು ಮೂಲಗಳ ಪ್ರಕಾರ ಸೆಪ್ಟೆಂಬರ್ ಅಂತ್ಯದೊಳಗೆ ತುಟ್ಟಿ ಭತ್ಯೆಯನ್ನು ಯನ್ನು ಘೋಷಣೆ ಮಾಡಲಾಗುತ್ತದೆ. ಆದರೆ ಅಕ್ಟೋಬರ್ ತಿಂಗಳ ಸಂಬಳದೊಂದಿಗೆ ಅದನ್ನು ಪಾವತಿಸಬಹುದು ಅಂತಹ ಪರಿಸ್ಥಿತಿಯಲ್ಲಿ ಮೂರು ತಿಂಗಳ ಬಾಕಿಯನ್ನು ನೌಕರರು ಮತ್ತು ಪಿಂಚಣಿದಾರರು ಪಡೆಯುತ್ತಾರೆ.
ಈ ಒಂದು ಬಾಕಿಯೂ ಹಿಂದಿನ ತುಟ್ಟಿ ಭತ್ಯೆ ಮತ್ತು ಹೊಸ ತುಟ್ಟಿ ಭತ್ಯೆಯ ನಡುವಿನ ವ್ಯತ್ಯಾಸವಾಗಿರುತ್ತದೆ ಎಂದು ಹೇಳಬಹುದು. ಶೇಕಡ 50ರಷ್ಟು ಡಿಎ ಮತ್ತು ಡಿ ಆರ್ ಅನ್ನು ಇಲ್ಲಿಯವರೆಗೆ ಪಡೆಯಲಾಗುತ್ತಿದೆ. ಶೇಕಡ 53ಕ್ಕೆ ಇದು ಈಗ ಏರಿಕೆಯಾಗಲಿದ್ದು ಮೂರರಷ್ಟು ಬಾಕಿಯನ್ನು ಅಂತಹ ಪರಿಸ್ಥಿತಿಯಲ್ಲಿ ಪಾವತಿಸಲಾಗುತ್ತದೆ. ಅಂದರೆ ಇದು ಜುಲೈ ಆಗಸ್ಟ್ ಮತ್ತು ಸೆಪ್ಟೆಂಬರ್ ಅನ್ನು ಒಳಗೊಂಡಿರುತ್ತದೆ.
ಹೀಗೆ ಕೇಂದ್ರ ಸರ್ಕಾರ ನೌಕರರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆದರೆ ಇದನ್ನು ಕೂಡ ಘೋಷಣೆ ಮಾಡಿರುವುದಿಲ್ಲ ಮುಂದೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಘೋಷಣೆ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ನೌಕರರಿಗೆ ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ವೇತನ ಸಿಗಲಿದೆ ಎಂಬ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.