ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರ ಇದೀಗ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದೆ. ಕೃಷಿ ಜೊತೆಗೆ ಆರ್ಥಿಕವಾಗಿ ರೈತರಿಗೆ ನೆರವು ನೀಡಲು 57,000ಗಳ ಸಹಾಯಧನವನ್ನು ಕುರಿ ದನ ಕೋಳಿ ಶೆಡ್ ನಿರ್ಮಾಣ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.
ಕೃಷಿ ಚಟುವಟಿಕೆಯಲ್ಲಿ ಸಾಕಷ್ಟು ನಷ್ಟಕ್ಕೆ ರೈತರು ಇತ್ತೀಚಿನ ದಿನಗಳಲ್ಲಿ ಒಳಗಾಗುತ್ತಿದ್ದಾರೆ ಅಂದರೆ ಇತ್ತೀಚಿನ ಹವಾಮಾನವು ಸಾಕಷ್ಟು ಸರಿ ಇಲ್ಲದ ಕಾರಣ ಈ ಒಂದು ಸನ್ನಿವೇಶದಲ್ಲಿ ಆರ್ಥಿಕವಾಗಿ ಕೃಷಿ ಜೊತೆಗೆ ರೈತರಿಗೆ ಸದೃಢರಾಗಲು ಕುರಿ ಕೋಡಿ ಹೀಗೆ ಇತರೆ ಪ್ರಾಣಿಗಳ ಸಾಗಾಣಿಕೆ ಸಹ ಮಾಡಬಹುದಾಗಿದೆ.
ಕುರಿ ದನ ಕೋಳಿ ಶೆಡ್ ನಿರ್ಮಾಣ ಮಾಡಲು ಸಹಾಯಧನ :
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ನೆರವು ನೀಡಲು ರೈತರಿಗೆ ಕುರಿ ಕೋಳಿ ದನ ಮತ್ತು ಹಂದಿಗಳ ಸಾಕಾಣಿಕೆ ಮಾಡಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
- ಶೆಡ್ಡು ನಿರ್ಮಾಣ ಮಾಡುವಂತಹ ಜಾಗದ ಅಳತೆಯು 18 ಅಡಿ ಉದ್ದ ಗೋಡೆ.
- 10 ಅಡಿ ಅಗಲ.
- 5 ಅಡಿ ಎತ್ತರದ.
ಮೇವು ತೊಟ್ಟಿ ನಿರ್ಮಾಣ ಮಾಡಲು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 57,000ಗಳ ಸಹಾಯಧನವನ್ನು ನೀಡಲಾಗುತ್ತಿದೆ. 10556 ರೂಪಾಯಿ ಕೂಲಿ ವೆಚ್ಚವಾಗಲಿದ್ದು ಎಲ್ಲಾ ಸಾಮಗ್ರಿಗಳ 46444 ರೂಪಾಯಿಗಳನ್ನು ಒಳಗೊಂಡಿರುತ್ತದೆ.
ಇದನ್ನು ಓದಿ : ಮಹಿಳೆಯರಿಗೆ ಸರ್ಕಾರದಿಂದ 50,000 ಜೊತೆಗೆ 25,000 ಹಣ ಫ್ರೀ : ಈ ಯೋಜನೆಗೆ ಕೂಡಲೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ :
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶಟ್ ನಿರ್ಮಾಣ ಮಾಡಲು ಆಸಕ್ತಿ ಇರುವಂತಹ ರೈತರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು :
ಕುರಿ ಮತ್ತು ಕೋಳಿ ಹೀಗೆ ಇತರ ಪ್ರಾಣಿಗಳ ಸಾಕಾಣಿಕೆ ಮಾಡಲು ಆಸಕ್ತಿ ಹೊಂದಿರುವಂತಹ ರೈತರು ಉದ್ಯೋಗ ಖಾತ್ರಿ ಯೋಜನೆ, ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಪ್ರಮುಖ ದಾಖಲೆಗಳು,
- ರೇಷನ್ ಕಾರ್ಡ್.
- ಆಧಾರ್ ಕಾರ್ಡ್.
- ಜಾನುವಾರುಗಳನ್ನು ಸಾಕಾಣಿಕೆ ಮಾಡಿರುವಂತಹ ದೃಢೀಕರಣ ಪತ್ರ.
- ಜಾಬ್ ಕಾರ್ಡ್.
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಪಾಸ್ ಬುಕ್.
- ಮೊಬೈಲ್ ನಂಬರ್.
ಅರ್ಹತೆಗಳು :
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಬೇಕಾದರೆ ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ರೈತರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
- ಬಿಪಿಎಲ್ ಕಾರ್ಡ್ ಬಂದಿರುವ ರೈತರು.
- ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿರುವ ರೈತರು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು.
- ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಜಾಬ್ ಕಾರ್ಡ್ ಹೊಂದಿರಬೇಕು
- ಸಣ್ಣ ಮತ್ತು ಅತಿ ಸಣ್ಣ ರೈತರು.
- ಅರ್ಜಿಯನ್ನು ಸಲ್ಲಿಸಲು ಬಯಸುವ ರೈತರು ಕನಿಷ್ಠ ನಾಲ್ಕು ಜಾನುವಾರುಗಳನ್ನು ಹೊಂದಿರಬೇಕು.
- ಪಶುವೈದ್ಯಾಧಿಕಾರಿಗಳಿಂದ ಪಶು ದೃಢೀಕರಣ ಪತ್ರವನ್ನು ರೈತರು ಹೊಂದಿರಬೇಕು.
ಹೀಗೆ ರಾಜ್ಯ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕುರಿ ಮತ್ತು ಕೋಳಿ ಜಾನುವಾರುಗಳ ಸಾಕಾಣಿಕೆ ಮಾಡುವುದಕ್ಕಾಗಿ ಶಡ್ಡನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ರೈತರಿಗೆ ನೀಡುತ್ತಿದ್ದು ರಾಜ್ಯ ಸರ್ಕಾರದ ಈ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ನಿಮಗೆ ತಿಳಿದಿರುವಂತಹ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಜಾನುವಾರುಗಳಿಗೆ ಶಡ್ ನಿರ್ಮಾಣ ಮಾಡಲು ಬಯಸುತ್ತಿದ್ದರೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 57,000ಗಳ ಸಹಾಯಧನವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿ. ಇದರಿಂದ ರೈತರ ವೆಚ್ಚವು ಕೂಡ ಕಡಿಮೆಯಾಗಲಿದೆ ಧನ್ಯವಾದಗಳು.