ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ವಸತಿ ರಹಿತ ಬಡವರಿಗೆ ಬೆಂಗಳೂರು ಸುತ್ತಮುತ್ತ ಮುಖ್ಯಮಂತ್ರಿಗಳ ಬಹು ಮಹಡಿ ವಸತಿ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಾಣ ಮಾಡುತ್ತಿರುವ ಸಿಂಗಲ್ ಬೆಡ್ ರೂಂನ ಸುಮಾರು 4000 ಫ್ಲ್ಯಾಟ್, ಮನೆಗಳು ಸಿದ್ಧವಾಗಿದ್ದು, ಮೂರ್ನಾಲ್ಕು ತಿಂಗಳಲ್ಲಿ ವಾಸಕ್ಕೆ ಲಭ್ಯವಾಗಲಿವೆ.

ನೀರಿನ ಸಂಪರ್ಕ, ವಿದ್ಯುತ್ ಸೇರಿದಂತೆ ಇನ್ನಿತರ ಅಂತಿಮ ಹಂತದ ಕಾಮಗಾರಿ ಬಾಕಿ ಉಳಿದಿದ್ದು, ಎಲ್ಲವನ್ನು ಪೂರ್ಣಗೊಳಿಸಿ ನಿಗದಿತ ಶುಲ್ಕ ಪಾವತಿಸುವ ಅರ್ಜಿದಾರರಿಗೆ ಫ್ಲ್ಯಾಟ್ ಬೀಗ ಹಸ್ತಾಂತರಿಸಲು ವಸತಿ ನಿಗಮ ಮುಂದಾಗಿದೆ.
ಮಹದೇವಪುರ, ಆನೇಕಲ್, ಯಲಹಂಕ, ಬೆಂಗಳೂರು ದಕ್ಷಿಣ, ದಾಸರಹಳ್ಳಿ, ಕೆಆರ್ ಪುರ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಪೂರ್ಣಗೊಂಡ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು. ಈ ಯೋಜನೆಗೆ ಸರ್ಕಾರದಿಂದಲೇ ಜಮೀನು ಒದಗಿಸಲಾಗಿದೆ. ಮೂಲ ಸೌಕರ್ಯ ಸೇರಿ ಫ್ಲ್ಯಾಟ್ ದರ 11.20 ಲಕ್ಷ ರುಪಾಯಿ ನಿಗದಿಪಡಿಸಿದ್ದು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಸರ್ಕಾರದಿಂದ 3.50 ಲಕ್ಷ ರೂ. ಸಬ್ಸಿಡಿ, ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.
ಮುಂಗಡವಾಗಿ ಫ್ಲ್ಯಾಟ್ ಬುಕ್ ಮಾಡಿ ಮುಂಗಡ ಠೇವಣಿಯನ್ನು ಇಟ್ಟಿರುವ ಅರ್ಜಿದಾರರಿಗೆ ರಾಜ್ಯ ಸರ್ಕಾರವು ಮತ್ತೆ 1 ಲಕ್ಷ ರೂಪಾಯಿಗಳನ್ನು ಕಡಿತಗೊಳಿಸಿದ್ದು, ಫ್ಲ್ಯಾಟ್ ಬೆಲೆ ಅಂತಿಮವಾಗಿ ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರಿಗೆ 6.7 ಲಕ್ಷ ರೂ, ಸಾಮಾನ್ಯ ವರ್ಗದವರಿಗೆ 7.50 ಲಕ್ಷ ರೂಪಾಯಿ ಆಗಲಿದೆ. ಅರ್ಜಿದಾರರು ಪಡಿತರ ಚೀಟಿಯನ್ನು ಹೊಂದಿದ್ದು, ಕುಟುಂಬದ ವಾರ್ಷಿಕ ಆದಾಯವು 3 ಲಕ್ಷ ಮಿತಿಗಿಂತ ಜಾಸ್ತಿ ಇರಬಾರದು. ಯೋಜನೆಯಲ್ಲಿ ಒಟ್ಟು 46,499 ಮನೆಗಳನ್ನು ನಿರ್ಮಿಸಲಾಗುವುದು.
ಇತರೆ ವಿಷಯಗಳು:
ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಗುಡ್ ನ್ಯೂಸ್! ಈ ಯೋಜನೆಗೆ ಅರ್ಜಿ ಆಹ್ವಾನ
ಹೊಸ ಲೇಬರ್ ಕಾರ್ಡ್ ಗೆ ಈ ಕೂಡಲೇ ಅರ್ಜಿ ಸಲ್ಲಿಸಿ : ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ