ಸ್ಥಗಿತಗೊಂಡಿದ್ದ ರೈತರ ಯೋಜನೆ ಪುನಾರಂಭ! ಕೂಡಲೇ ಸದುಪಯೋಗ ಪಡೆದುಕೊಳ್ಳಿ

ರಾಜ್ಯದಲ್ಲಿ ಹಿಂದಿನ ಸರ್ಕಾರವು ಸ್ಥಗಿತಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯು ಮತ್ತೆ ಪುನರಾರಂಭ ಮಾಡಲಾಗಿದೆ ಎಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಮಾಹಿತಿಯನ್ನು ತಿಳಿಸಿದ್ದಾರೆ

Krishi Bhagya Scheme Information

ಅರ್ಹ ರೈತರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಯೋಜನೆಯ ಲಾಭವನು ಪಡೆಯಲು ಆಸಕ್ತ ರೈತರು ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗಳನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಸಚಿವರು ಮಾಹಿತಿಯನ್ನು ನೀಡಿದ್ದಾರೆ.

ಕಳೆದ ವರ್ಷ ಕೃಷಿ ಭಾಗ್ಯ ಯೋಜನೆಯು ಕೇವಲ ಮಳೆಯಾಶ್ರಿತ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಪ್ರಸಕ್ತವಾದ ಸಾಲಿನಲ್ಲಿ ಕೃಷಿ ಭಾಗ್ಯಯೋಜನೆಯನ್ನು ಅಚ್ಚುಕಟ್ಟು ಪ್ರದೇಶಕಕ್ಕೂ ವಿಸ್ತರಣೆ ಮಾಡಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರು ಕೃಷಿ ಭಾಗ್ಯಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು.

ಕೊಳವೆ ಬಾವಿಯ ಬದಲಾಗಿ ರೈತರು ಹೂಡಿಕೆಯನ್ನು ಕೃಷಿ ಭಾಗ್ಯಯೋಜನೆಯ ಘಟಕಗಳಲ್ಲಿ ಮಾಡಿ ಸುಸ್ಥಿರವಾದ ಕೃಷಿಗಾಗಿ ಬಳಸಬಹುದು. ರೈತರು ಕೆಂಪು ಮಣ್ಣಿನಲ್ಲಿ ಕಡ್ಡಾಯವಾಗಿ ಟಾರ್ಪಲ್ ಗಳ ಹೊದಿಕೆ ಹಾಗೂ ತಂತಿಯ ಬೇಲಿಯನ್ನು ಎಲ್ಲಾ ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ.

ಕೃಷಿ ಹೊಂಡವನ್ನು ಮಾಡಿಸಿಕೊಂಡ ಎಲ್ಲಾ ಫಲಾನುಭವಿಗಳಿಗೆ ಕ್ಷೇತ್ರ ಬದು, ಡಿಸೇಲ್ ಇಂಜನ್ ಹಾಗೂ ತುಂತುರು ನೀರಾವರಿಯ ಘಟಕಗಳಿಗೆ ಸಹ ಸಹಾಯಧನಗಳು ಲಭ್ಯವಿರುತ್ತದೆ. ಒಣ ಭೂಮಿಯ ರೈತರ ಆದಾಯ ಮಳೆಯ ಮೇಲೆಯೇ ಅವಲಂಬಿತವಾಗಿರುವುದರಿಂದ ನಿರೀಕ್ಷಿತ ಆದಾಯವು ಸಿಗುವುದು ಕಷ್ಟಸಾಧ್ಯವಾಗಿದ್ದು, ರೈತರು ಕೃಷಿ ಭಾಗ್ಯ ಯೋಜನೆಯ ವಿವಿಧ ಘಟಕಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು.

ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

267 ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

Ration : 1 ಲಕ್ಷದವರೆಗೆ ರೇಷನ್ ಕಾರ್ಡ್ ಹೊಂದಿದವರಿಗೆ ಹಣಕಾಸಿನ ನೆರವು : ಈ ಯೋಜನೆಗೆ ಅಪ್ಲೈ ಮಾಡಿ

Leave a Comment