Gas : ಹಬ್ಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ಮಹಿಳೆಯರಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರ್ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ನೀಡಲಾಗುತ್ತಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದೆ.

Pradhan Mantri Ujwala Yojana
Pradhan Mantri Ujwala Yojana

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಏನೆಲ್ಲಾ ಅರ್ಹತೆಯ ಮಾನದಂಡಗಳನ್ನು ಹೊಂದಿರಬೇಕು ಮತ್ತು ದಾಖಲೆಗಳು ಏನೆಲ್ಲ ಹೊಂದಿರಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 :

ಉಚಿತವಾಗಿ ಗ್ಯಾಸ್ ಸಿಲಿಂಡರ್ ಅನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಅಡಿಯಲ್ಲಿ ಪಡೆದುಕೊಳ್ಳಲು ತಮ್ಮ ಹೆಸರನ್ನು ಮಹಿಳೆಯರು ನೋಂದಾಯಿಸಿಕೊಳ್ಳಬೇಕು. ಈ ಯೋಜನೆಯ ಅಡಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಂತಹ ಅರ್ಹ ಮಹಿಳೆಯರಿಗೆ ಉಚಿತ ಸಿಲಿಂಡರ್ ಮತ್ತು ಒಲೆಯನ್ನು ನೀಡಲಾಗುತ್ತದೆ.

  1. ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ 2016ರಲ್ಲಿ ಪ್ರಾರಂಭಿಸಿತು.
  2. ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಮಹಿಳಾ ಸದಸ್ಯರಿಗೆ ಮೊದಲ ಹಂತದಲ್ಲಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್ ಸಂಪರ್ಕ ಒದಗಿಸುವ ಗುರಿಯನ್ನು ಈ ಒಂದು ಯೋಜನೆಯು ಹೊಂದಿದೆ.
  3. 2018 ರ ಏಪ್ರಿಲ್ ನಲ್ಲಿ ಈ ಒಂದು ಯೋಜನೆಯನ್ನು ವಿಸ್ತರಿಸಲಾಯಿತು.
  4. ಈ ಯೋಜನೆಯಲ್ಲಿ ಏಳು ವರ್ಗಗಳಾದ ( ಎಸ್ಸಿ ಎಸ್ಟಿ,AAY,PMAY, ಹಿಂದುಳಿದ ವರ್ಗಗಳು, ಅರಣ್ಯ ನಿವಾಸಿಗಳು, ಚಹಾತೋಟ, ದ್ವೀಪಗಳು ) ಈ ವರ್ಗಗಳ ಮಹಿಳೆಯರಿಗೆ ಯೋಜನೆಯನ್ನು ವಿಸ್ತರಿಸಲಾಯಿತು.
  5. ಎಂಟು ಕೋಟಿ ಮಹಿಳಾ ಸದಸ್ಯರಿಗೆ ಎರಡನೇ ಹಂತದಲ್ಲಿ ಎಲ್ಪಿಜಿ ಸಂಪರ್ಕವನ್ನು ನೀಡುವ ಗುರಿಯನ್ನು ಈ ಒಂದು ಯೋಜನೆ ಹೊಂದಿದೆ.
  6. ಸುಮಾರು ಒಂದು ಕೋಟಿ ಗ್ಯಾಸ್ ಸಂಪರ್ಕಗಳನ್ನು ಬಡವರಿಗೆ ಈ ಆರ್ಥಿಕ ವರ್ಷದಲ್ಲಿ ಉಚಿತ ರಿಫೀಲ್ ಮತ್ತು ಸ್ಟೌವ್ ಅನ್ನು ಪ್ರದಾನ ಮಂತ್ರಿ ಉಜ್ವಲ ಯೋಜನೆ 2.0 ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರವು ವಿಸ್ತರಿಸುತ್ತದೆ.
  7. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ಈ ವರ್ಷದ ವಾರ್ಷಿಕ ಬಜೆಟ್ ನಲ್ಲಿ ಒಂದು ಕೋಟಿ ಹೊಸ ಫಲಾನುಭವಿಗಳಿಗೆ 2021 ಮತ್ತು 22 ರಲ್ಲಿ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಣೆ ಮಾಡಿದರು.
  8. 8 ಕೋಟಿ ಫಲಾನುಭವಿಗಳು ಈಗಾಗಲೇ ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆದಿದ್ದಾರೆ.

ಅರ್ಹತ ಮಾನದಂಡಗಳು :

  1. ಅರ್ಜಿದಾರರು ಮಹಿಳೆ ಆಗಿರಬೇಕು.
  2. ಮಹಿಳೆಯು ಮನೆಯ ಮುಖ್ಯಸ್ಥೆ ಯಾಗಿರಬೇಕು.
  3. 18 ವರ್ಷ ಮೇಲ್ಪಟ್ಟ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ಇದನ್ನು ಓದಿ : Home :ಉಚಿತವಾಗಿ ಹೊಸ ಮನೆ ನಿರ್ಮಿಸಲು ಸರ್ಕಾರದಿಂದ ಅರ್ಜಿ ಅಹ್ವಾನ ತಕ್ಷಣ ಅರ್ಜಿ ಸಲ್ಲಿಸಿ

ಪ್ರಮುಖ ದಾಖಲೆಗಳು :

  1. ಆಧಾರ್ ಕಾರ್ಡ್
  2. ಮೊಬೈಲ್ ನಂಬರ್
  3. ಪಾಸ್ಪೋರ್ಟ್ ಸೈಜ್ ಫೋಟೋ
  4. ಬ್ಯಾಂಕ್ ಪಾಸ್ ಬುಕ್
  5. ರೇಷನ್ ಕಾರ್ಡ್.

ಹೆಸರನ್ನು ನೋಂದಣಿ ಮಾಡಿಕೊಳ್ಳುವ ವಿಧಾನ :

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಯೋಜನೆಗೆ ತಮ್ಮ ಹೆಸರನ್ನು ಮಹಿಳೆಯರು ನೊಂದಣಿ ಮಾಡಿಸಿಕೊಳ್ಳಲು ಕೆಲವೊಂದು ಮಾರ್ಗಗಳನ್ನು ಅನುಸರಿಸಬೇಕು.

  1. ಜನ ಸೇವಾ ಕೇಂದ್ರ : ಜನಸೇವಾ ಕೇಂದ್ರಕ್ಕೇ ಭೇಟಿ ನೀಡಿ ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. https://pmuy.gov.in
  2. ಗ್ಯಾಸ್ ಡೀಲರ್ : ಅರ್ಜಿದಾರರು ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು ತಮ್ಮ ಸ್ಥಳೀಯ ಗ್ಯಾಸ್ ಡೀಲರ್ ಅನ್ನು ಭೇಟಿ ಮಾಡಲಾಗಿದೆ.
    ಹೀಗೆ ಕೇಂದ್ರ ಸರ್ಕಾರದ ಜಾರಿಗೆ ತಂದಿರುವಂತಹ ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಅಡಿಯಲ್ಲಿ ಮಹಿಳೆಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಅನ್ನು ಪಡೆದುಕೊಳ್ಳಬಹುದು.

ಕೇಂದ್ರ ಸರ್ಕಾರವು ಮಹಿಳೆಯರನ್ನು ಸಬಲರನ್ನಾಗಿಸುವ ಉದ್ದೇಶದಿಂದ ಹಾಗೂ ಅವರ ಆರೋಗ್ಯದ ದೃಷ್ಟಿಯಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಪ್ರಯೋಜನವನ್ನು ಅರ್ಹ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಮಾಹಿತಿಯನ್ನು ಎಲ್ಲ ಮಹಿಳೆಯರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment