Agriculture : ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಶೇ .90% ಸಹಾಯಧನ : ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಯಾವ ರೀತಿಯ ಯೋಜನೆಗಳನ್ನು ಜಾರಿಗೊಳಿಸಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.

Krushi Bhagya Yojana
Krushi Bhagya Yojana

ಸದ್ಯ ಇದೀಗ ರೈತರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲಾ ಸೌಲಭ್ಯಗಳನ್ನು ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದು ಎಷ್ಟು ಸಹಾಯಧನ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ರೈತರಿಗೆ ಸಿಗಲಿದೆ ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ಈ ಕೆಳಗಿನಂತೆ ತಿಳಿದುಕೊಳ್ಳಬಹುದು.

ಕೃಷಿಭಾಗ್ಯ ಯೋಜನೆ :

ಕರ್ನಾಟಕ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಸುಸ್ತಿರ ಕೃಷಿಯನ್ನು ಮಳೆಯಾಧಾರಿತ ಕೃಷಿ ನೀತಿ ಅನ್ವಯ ಉತ್ತೇಜಿಸಿ ರೈತರ ಜೀವನ ಮಟ್ಟ ಮತ್ತು ಬೆಳೆ ಉತ್ಪಾದಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಸಪ್ಪ ಸಾಲಿನಿಂದ ಕೃಷಿ ಭಾಗ್ಯ ಯೋಜನೆಯನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮರು ಜಾರಿಗೊಳಿಸಲಾಗುತ್ತಿದೆ.

ಕೃಷಿಭಾಗ್ಯ ಯೋಜನೆಯ ಜೊತೆಗೆ ಕೃಷಿ ಭಾಗ್ಯ- SDMF ಯೋಜನೆಯನ್ನು ಕೂಡ ಬರಪೀಡಿತ ಬ್ರಹ್ಮಾವರ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಪ್ರಾರಂಭ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಶೇಕಡ 90ರಷ್ಟು ಸಹಾಯ :

ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯು ಅನುಷ್ಠಾನಗೊಳ್ಳುತ್ತಿದ್ದು ಈ ಕೆಳಗಿನ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಸಾಮಾನ್ಯ ವರ್ಗದ ರೈತರಿಗೆ ಶೇಕಡ 80ರಷ್ಟು ಮತ್ತು ಎಸ್ಸಿ ಎಸ್ಟಿ ರೈತರಿಗೆ ಶೇಕಡ 90ರಷ್ಟು ನೀಡಲಾಗುತ್ತದೆ.

  1. ಕ್ಷೇತ್ರ ಬದು ನಿರ್ಮಾಣ.
  2. ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ.
  3. ಕೃಷಿ ಹೊಂಡ.
  4. ಡೀಸೆಲ್ ಅಥವಾ ಪೆಟ್ರೋಲ್ ಅಥವಾ ಸೋಲಾರ್ ಪಂಪ್ ಸೆಟ್ ಘಟಕಗಳು.
    ಹೀಗೆ ಈ ಮೇಲಿನ ಕ್ರಿಶ್ಚ ಚಟುವಟಿಕೆಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ.
    ಎಲ್ಲ ವರ್ಗದ ರೈತರಿಗೆ ತುಂತುರು ಹನಿ ನೀರಾವರಿ ಘಟಕದ ಅಡಿಯಲ್ಲಿ ಶೇಕಡ 90ರಷ್ಟು ಸಹಾಯಧನ ಮತ್ತು ಸಾಮಾನ್ಯ ವರ್ಗದ ರೈತರಿಗೆ ಶೇಕಡ 40ರಷ್ಟು ಮತ್ತು ಎಸ್ಸಿ ಎಸ್ ರೈತರಿಗೆ ಶೇಕಡ 40ರಷ್ಟು ಸಹಾಯಧನವನ್ನು ಕೃಷಿ ಹೊಂಡದ ಸುತ್ತಲೂ ತಿಂತಿ ಬೇಲಿ ಅಳವಡಿಸಿಕೊಳ್ಳಲು ನೀಡಲಾಗುತ್ತಿದೆ.

ಕೃಷಿಭಾಗ್ಯ ಯೋಜನೆಗೆ ಪ್ರಮುಖ ದಾಖಲೆಗಳು :

  1. ಪಾಸ್ಪೋರ್ಟ್ ಸೈಜ್ ಫೋಟೋ.
  2. ಜಮೀನಿನ ಪಹಣಿ ಪತ್ರ.
  3. ಜಾತಿ ಪ್ರಮಾಣ ಪತ್ರ.
  4. ಆದಾಯ ಪ್ರಮಾಣ ಪತ್ರ.
  5. ಬ್ಯಾಂಕ್ ಪಾಸ್ ಬುಕ್.

ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಕೃಷಿ ಭಾಗ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಮೇಲಿನ ಅರ್ಜುನ ಮನೆ ಮತ್ತು ಮೇಲಿನ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು.

ಇದಷ್ಟೇ ಅಲ್ಲದೆ ಹೆಚ್ಚಿನ ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದೆಂದು ಜಂಟಿ- ಕೃಷಿ ನಿರ್ದೇಶಕರು ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಅವರು ಯಾವುದೇ ರೀತಿಯ ಆರ್ಥಿಕ ನಷ್ಟವನ್ನು ಅನುಭವಿಸಬಾರದು ಎನ್ನುವ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು.

ಈ ಯೋಜನೆಯ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಅದರಲ್ಲಿ ಮುಖ್ಯವಾಗಿ ರೈತ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ರಾಜ್ಯ ಸರ್ಕಾರದಿಂದ ಕೃಷಿ ಭಾಗ್ಯ ಯೋಜನೆ ಜಾರಿಯಲ್ಲಿದೆ ಎಂಬುದರ ಬಗ್ಗೆ ತಿಳಿಸಿ. ಇದರಿಂದ ಅವರು ಕೂಡ ಕೃಷಿ ಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆದು ತಮ್ಮ ಕೃಷಿ ಚಟುವಟಿಕೆಗಳನ್ನು ಸುಲಭವಾಗಿ ನಡೆಸಲು ಸಾಧ್ಯವಾಗುತ್ತದೆ ಧನ್ಯವಾದಗಳು.

ಇತರೆ ವಿಷಯಗಳು :

Leave a Comment