Home :ಉಚಿತವಾಗಿ ಹೊಸ ಮನೆ ನಿರ್ಮಿಸಲು ಸರ್ಕಾರದಿಂದ ಅರ್ಜಿ ಅಹ್ವಾನ ತಕ್ಷಣ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರದ ಒಂದು ಹೊಸ ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇನೆ. ತನ್ನದೇ ಆದಂತಹ ಶಾಶ್ವತ ಮನೆಯನ್ನು ಪ್ರತಿಯೊಬ್ಬ ವ್ಯಕ್ತಿಯು ಹೊಂದಬೇಕೆನ್ನುವ ಉದ್ದೇಶದಿಂದ ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ಹೊಸ ಯೋಜನೆಯನ್ನು ಜಾರಿಗೊಳಿಸಿದ್ದಾರೆ.

A wish like building a new house can be fulfilled today

ಈ ಒಂದು ಯೋಜನೆ ಮೂಲಕ ಯಾವ ರೀತಿ ಹಣವನ್ನು ಪಡೆದುಕೊಂಡು ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆ :

ಕೇಂದ್ರದ ಮೋದಿ ಸರ್ಕಾರವು ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯನ್ನು ಹೊಂದಬೇಕೆನ್ನುವ ಉದ್ದೇಶದಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದ್ದಾರೆ. ಈ ಒಂದು ಯೋಜನೆಯ ಪ್ರಯೋಜನವನ್ನು ನಗರ ಮತ್ತು ಗ್ರಾಮೀಣ ಭಾಗದ ಜನರು ಪಡೆದುಕೊಳ್ಳಬಹುದು.

  1. ಸರ್ಕಾರವು ಗೃಹ ಸಾಲದ ಮೇಲೆ ಈ ಯೋಜನೆಯಡಿಯಲ್ಲಿ ಸಬ್ಸಿಡಿ ನೀಡುತ್ತದೆ
  2. ಸಬ್ಸಿಡಿ ಮೊತ್ತವು ಸಾಲವನ್ನು ತೆಗೆದುಕೊಳ್ಳುವ ವ್ಯಕ್ತಿಯ ಮನೆಯ ಗಾತ್ರ ಮತ್ತು ಆದಾಯವನ್ನು ಅವಲಂಬಿಸಿರುತ್ತದೆ.
  3. ನಾಲ್ಕು ಕೋಟಿ ಜನರು ಇದುವರೆಗೂ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಸಂತ ಮನೆ ಕನಸು ಕಂಡಿರುವಂತಹ ಜನರಿಗೆ ಬಿಗ್ ಅಪ್ಡೇಟ್ :

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಮೂರನೇ ಅವಧಿಯ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮನೆಗಳ ನಿರ್ಮಾಣಕ್ಕೆ ಮೂರು ಕೋಟೆ ಅನುಮೋದನೆಯನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಈ ಮನೆಗಳನ್ನು ನಿರ್ಮಿಸಲಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಎರಡು ವಿಧಗಳನ್ನು ಮಾಡಲಾಗಿದ್ದು ಅದರ ಮೂಲಕ ಪ್ರಯೋಜನಗಳನ್ನು ಜನರಿಗೆ ನೀಡಲಾಗುತ್ತದೆ.

ಇದನ್ನು ಓದಿ : ಗಣೇಶ ಹಬ್ಬದ ಇತಿಹಾಸ ಮಹತ್ವ ಮತ್ತು ಆಚರಣೆಗಳ ಏಕೆ ಮಾಡಬೇಕು ನಿಮಗೆ ಗೊತ್ತ .?

ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಯೋಜನೆ :

  1. ಪ್ರಧಾನ ಮಂತ್ರಿ ಆವಾಸ್ ನಗರ ಯೋಜನೆ.
    ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನವನ್ನು ವಾರ್ಷಿಕ ಆದಾಯ 18 ಲಕ್ಷದವರೆಗೆ ಇರುವಂತಹ .ಯಾವುದೇ ವ್ಯಕ್ತಿಯು ಪಡೆದುಕೊಳ್ಳಬಹುದಾಗಿದೆ. ಈ ಆದಾಯವನ್ನು 3 ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ.
  2. EWS ಆರ್ಥಿಕವಾಗಿ ದುರ್ಬಲ ಗುಂಪು : 3 ಲಕ್ಷ.
  3. LIG ಕಡಿಮೆ ಆದಾಯದ ಗುಂಪು : 3-6 ಲಕ್ಷ.
  4. MIG ಮಧ್ಯಮ ಆದಾಯದ ಗುಂಪು : 6-18 ಲಕ್ಷ.
    ಹೀಗೆ ಈ ಗುಂಪುಗಳಿಗೆ ಅನುಗುಣವಾಗಿ ವಾರ್ಷಿಕವಾಗಿ ಆದಾಯವನ್ನು ನಿಗದಿಪಡಿಸಲಾಗಿದೆ.

ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:

ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.

  1. ಭಾರತದ ಪ್ರಜೆಯಾಗಿರಬೇಕು.
  2. ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ವರ್ಷದ ವಯಸ್ಸಾಗಿರಬೇಕು.
  3. ಭಾರತದಲ್ಲಿ ಎಲ್ಲಿಯೂ ಕೂಡ ಅರ್ಜಿದಾರರು ಸ್ವಂತ ಶಾಶ್ವತ ಮನೆಯನ್ನು ಹೊಂದಿರಬಾರದು.
  4. ಯೋಜನೆಗೆ ಅರ್ಜಿ ಸಲ್ಲಿಸುವ ಕುಟುಂಬದ ಯಾವುದೇ ವ್ಯಕ್ತಿಯು ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
  5. ಸ್ವಂತ ಭೂಮಿಯನ್ನು ಹೊಂದಿದ್ದರು ಒಬ್ಬ ವ್ಯಕ್ತಿಯು ಮನೆಯಲ್ಲಿ ನಿರ್ಮಿಸದಿದ್ದರೆ ಈ ಯೋಜನೆಯಡಿಯಲ್ಲಿ ಅವನು ಮನೆಯನ್ನು ನಿರ್ಮಿಸಿಕೊಳ್ಳಲು ಸಾಲವನ್ನು ಪಡೆದುಕೊಳ್ಳಬಹುದು.
  6. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆಯನ್ನು ನಿರ್ಮಿಸಿಕೊಳ್ಳಲು ಕಚ್ಚಾ ಅಥವಾ ತಾತ್ಕಾಲಿಕ ಮನೆಗಳಲ್ಲಿ ವಾಸಿಸುವರು ಅರ್ಜಿ ಸಲ್ಲಿಸಬಹುದು.
  7. ಬ್ಯಾಂಕನಿಂದ ಸಾಲಕ್ಕೆ ಅರ್ಜಿ ಸಲ್ಲಿಸಿದ ನಂತರ ಗೃಹ ಸಾಲವನ್ನು ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ.
  8. ಗರಿಷ್ಠ ಮಿತಿ ಸಾಲ ಮರುಪಾವತಿಗೆ 20 ವರ್ಷಗಳು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಕೇಂದ್ರ ಸರ್ಕಾರ ಸ್ವಂತ ಮನೆ ಹೊಂದುವ ಕನಸನ್ನು ಇಟ್ಟುಕೊಂಡಿರುವಂತಹ ವ್ಯಕ್ತಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಇದರಿಂದ ಸುಲಭವಾಗಿ ಸಾಲವನ್ನು ಪಡೆದು ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು.

ಹಾಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಬಂಧು ಮಿತ್ರರಿಗೆ ಶೇರ್ ಮಾಡಿ ಇದರಿಂದ ಅವರು ಏನಾದರೂ ಸ್ವಂತ ಮನೆಯ ಕನಸನ್ನು ಹೊಂದಿದ್ದರೆ ಇದರಿಂದ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಧನ್ಯವಾದಗಳು.

ಇತರೆ ವಿಷಯಗಳು :

Leave a Comment