ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಟಾಟಾ ಕಂಪನಿಯು ನೀಡುತ್ತಿರುವಂತಹ ಒಂದು ಸಿಹಿ ಸುದ್ದಿಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. 10 ರಿಂದ 12 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿಗಳಿಗೆ ಟಾಟಾ ಕಂಪನಿಯು ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿದೆ.
ಟಾಟಾ ಕಂಪನಿ ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು ಅರ್ಹತೆಗಳೇನು ಪ್ರಮುಖ ದಾಖಲೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ಕೆಳಗಿನಂತೆ ತಿಳಿದುಕೊಳ್ಳಬಹುದು.
ಟಾಟಾ ಸ್ಕಾಲರ್ಶಿಪ್ :
ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವಂತಹ ವರ್ಗಗಳ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಅಂತಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಬೆಂಬಲಿಸುವುದಕ್ಕಾಗಿ ಟಾಟಾ ಕಂಪನಿಯು ಈ ಒಂದು ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
ವಿದ್ಯಾರ್ಥಿ ವೇತನವನ್ನು ಟಾಟಾ ಕ್ಯಾಪಿಟಲ್ ಪಂಪ್ ಸ್ಕಾಲರ್ಶಿಪ್ ಪ್ರೋಗ್ರಾಮ್ ಅಡಿಯಲ್ಲಿ ನೀಡಲಾಗುತ್ತಿದ್ದು ಇದರ ಪ್ರಯೋಜನವನ್ನು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಟಾಟಾ ಕಂಪನಿಯು ನೀಡುತ್ತಿರುವ ಈ ವಿದ್ಯಾರ್ಥಿ ವೇತನ ಮೊತ್ತವು 10,000 ದಿಂದ 12 ಸಾವಿರ ರೂಪಾಯಿಗಳವರೆಗೆ.
ಇದರ ಮೂಲಕ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ವಿದ್ಯಾಭ್ಯಾಸಕ್ಕಾಗಿ ಆಗುವಂತ ಖರ್ಚುಗಳನ್ನು ಈ ವಿದ್ಯಾರ್ಥಿ ವೇತನದ ಮೂಲಕ ನಿಭಾಯಿಸಿಕೊಳ್ಳಬಹುದಾಗಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಹತೆಗಳು :
- ಭಾರತೀಯ ವಿದ್ಯಾರ್ಥಿಯಾಗಿರಬೇಕು
- ಯಾವುದೇ ಒಂದು ಶಿಕ್ಷಣ ಸಂಸ್ಥೆಯಿಂದ 11 ಅಥವಾ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
- ಹಿಂದಿನ ತರಗತಿಯಲ್ಲಿ ವಿದ್ಯಾರ್ಥಿಯು ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.
- ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಕುಟುಂಬದ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದ ಎರಡೂವರೆ ಲಕ್ಷಕ್ಕಿಂತ ಹೆಚ್ಚಿರಬಾರದು.
- ಉದ್ಯೋಗಿಗಳ ಮಕ್ಕಳು ಟಾಟಾ ಕಂಪನಿಯು ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವುದಿಲ್ಲ.
ಪ್ರಮುಖ ದಾಖಲೆಗಳು :
ಟಾಟಾ ಕಂಪನಿ ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.
- ಆದಾಯ ಪ್ರಮಾಣ ಪತ್ರ.
- ಶೈಕ್ಷಣಿಕ ವರ್ಷದ ಶುಲ್ಕ ರಶೀದಿ.
- ಬ್ಯಾಂಕ್ ಪಾಸ್ ಬುಕ್.
- ಆಧಾರ್ ಕಾರ್ಡ್.
- ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ.
- ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ್.
- ಅಂಗವಿಕಲರಾಗಿದ್ದರೆ ಅಂಗವಿಕಲತೆಯ ಪ್ರಮಾಣ ಪತ್ರ.
- ಜಾತಿ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಟಾಟಾ ಕಂಪನಿಯು ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಟಾಟಾ ಕಂಪನಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು. ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಸುಲಭವಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು :
- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 05-09-2024
ಒಟ್ಟಾರೆ ಖಾಸಗಿ ಕಂಪನಿಗಳು ಕೂಡ ಬಡವರ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ವಿದ್ಯಾರ್ಥಿವೇತನವನ್ನು ನೀಡುವುದರ ಮೂಲಕ ಸಹಾಯ ಮಾಡುತ್ತಿದ್ದು ಇದೀಗ ಟಾಟಾ ಕಂಪನಿಯು ವಿದ್ಯಾರ್ಥಿ ವೇತನವನ್ನು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು ಇದರಿಂದ ಅಂತ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಹಾಯವಾಗುತ್ತದೆ.
ಹಾಗಾಗಿ ನಿಮಗೆ ತಿಳಿದಿರುವಂತಹ 12ನೇ ತರಗತಿ ವಿದ್ಯಾರ್ಥಿಗಳಿಗೆ ಟಾಟಾ ಕಂಪನಿಯು ನೀಡುತ್ತಿರುವಂತಹ ಈ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ಕೂಡ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲಿ ಧನ್ಯವಾದಗಳು.